ಶುಕ್ರವಾರ, ಜೂನ್ 25, 2021
25 °C

ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಪ್ರಾದೇಶಿಕ ಚಿತ್ರಗಳದ್ದೇ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಪ್ರಾದೇಶಿಕ ಚಿತ್ರಗಳದ್ದೇ ಮೇಲುಗೈ

 

 ನವದೆಹಲಿ, (ಪಿಟಿಐ):  59ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಪ್ರಾದೇಶಿಕ ಚಿತ್ರಗಳಾದ ಕರ್ನಾಟಕದ ಬ್ಯಾರಿ ಭಾಷೆಯ ~ಬ್ಯಾರಿ~ ಹೆಸರಿನ  ಮತ್ತು ಮಹಾರಾಷ್ಟ್ರದ ಮರಾಠಿ ಚಿತ್ರ ~ದೇವೂಲ್~  ಸಾಕ್ಷ್ಯ ಚಿತ್ರಗಳ ವಿಭಾಗದಲ್ಲಿ ಅತ್ಯತ್ತುಮ ಚಲನಚಿತ್ರ ಪ್ರಶಸ್ತಿಯನ್ನು ಹಂಚಿಕೊಂಡಿವೆ.

ನಟಿ ವಿದ್ಯಾ ಬಾಲನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ, ~ದೇವೂಲ್~ ನಾಯಕ ನಟ ಗಿರೀಶ್ ಕುಲಕರ್ಣಿ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಹಳ್ಳಿಯ ಸುಂದರ ಚಿತ್ರಣ ಹಾಗೂ ಧರ್ಮದ ವಾಣಿಜ್ಯೀಕರಣವನ್ನು ಅತ್ಯುತ್ತಮವಾಗಿ ಸೆರೆ ಹಿಡಿದ ಚಿತ್ರವಾಗಿದೆ.

ಬ್ಯಾರಿ ಭಾಷೆಯ ಮೊದಲ ಚಿತ್ರವಾಗಿರುವ ~ಬ್ಯಾರಿ~ಯು ಮಹಿಳೆಯೊಬ್ಬಳು ಅನ್ಯಾಯದ ಧಾರ್ಮಿಕ ನಿಬಂಧನೆಗೆ ಒಳಪಟ್ಟು ಶೋಷಿತಳಾಗುವ ಚಿತ್ರ.

ಪಂಜಾಬಿ ಭಾಷೆಯ ~ಅನ್ಹೆ ಘೊರೆ ದ ದಾನ್~ ಚಿತ್ರದ ನಿರ್ದೇಶಕ ಗುರುವಿಂದರ್ ಸಿಂಗ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ತಮಿಳು ಚಿತ್ರ ~ಅಳಗರಸಾಮಿಯನ್ ಕುದುರೈ~ ಚಿತ್ರ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಗೆ ಪಾತ್ರವಾದರೆ, ಇದೇ ಚಿತ್ರದ ಮುಖ್ಯ ಪಾತ್ರದಾರಿ ಅಪ್ಪು ಕುಟ್ಟಿ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.