ಶನಿವಾರ, ಮೇ 15, 2021
26 °C

ರಾಷ್ಟ್ರೀಯ ಸೀನಿಯರ್ ಹಾಕಿ: ಫೈನಲ್‌ಗೆ ಪಂಜಾಬ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಬಲಿಷ್ಠ ಪಂಜಾಬ್ ತಂಡದ ಎದುರು ಸೋಲು ಕಂಡ ಕರ್ನಾಟಕ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಸೀನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರೆ, ಪಂಜಾಬ್ ಫೈನಲ್‌ಗೆ ಲಗ್ಗೆ ಇಟ್ಟಿತು.ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ 5-2 ಗೋಲುಗಳಿಂದ ಕರ್ನಾಟಕವನ್ನು ಮಣಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಮಣಿಪುರದ ಎದುರು ಜಯ ಸಾಧಿಸಿದ್ದ ಕರ್ನಾಟಕ ಪ್ರಮುಖ ಘಟ್ಟದಲ್ಲಿ ನಿರೀಕ್ಷೆಯಂತೆ ಹೋರಾಟ ತೋರಲಿಲ್ಲ.ಪಂಜಾಬ್ ತಂಡದ ದೀಪಕ್ ಠಾಕೂರ್ (10 ಮತ್ತು 22ನೇ ನಿಮಿಷ), ಗುರ್ಜಿಂದರ್ ಸಿಂಗ್ (17ನೇ ನಿ). ಸರ್ವಜಿತ್ ಸಿಂಗ್ (45ನೇ ನಿ.) ಮತ್ತು ವಿಕ್ರಮಜಿತ್ ಸಿಂಗ್ (58ನೇ ನಿ.) ಗೋಲು ಕಲೆ ಹಾಕಿದರು.ಎಂ.ಕೆ. ಮುದ್ದಪ್ಪ ಏಳನೇ ನಿಮಿಷ ಮತ್ತು ನಿಕಿನ್ ತಿಮ್ಮಯ್ಯ (29ನೇ ನಿ.) ಗೋಲು ತಂದಿತ್ತು ಮರು ಹೋರಾಟ ನಡೆಸಿದರಾದರೂ, ಪಂಜಾಬ್‌ನ ಶಿಸ್ತುಬದ್ಧ ಮತ್ತು ಚುರುಕಿನ ಆಟದ ಮುಂದೆ ಕರ್ನಾಟಕದ ಪ್ರಯತ್ನ ಸಾಕಾಗಲಿಲ್ಲ.ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಏರ್ ಇಂಡಿಯಾ 7-3 ಗೋಲುಗಳಿಂದ ಹರಿಯಾಣವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಏರ್ ಇಂಡಿಯಾ ಮೊದಲಾರ್ಧ ಕೊನೆಗೊಂಡಾಗ 4-1ರಲ್ಲಿ ಮುನ್ನಡೆಯಲ್ಲಿತ್ತು. ಇದಕ್ಕೆ ಕಾರಣವಾಗಿದ್ದು ಅಸಾನ್ ಯೂಸುಫ್ (5ನೇ ನಿ.), ವಿಕ್ರಮ್ ಪಿಳ್ಲೈ (15ನೇ ನಿ.), ಪ್ರಭೋದ್ ಟರ್ಕಿ (28) ಮತ್ತು ಸಮೀರ್ ದಾದ್ (31ನೇ ನಿ.) ಅವರ ಹೊಂದಾಣಿಕೆಯ ಆಟ. ತಂಡದ ಇನ್ನುಳಿದ ಗೋಲುಗಳನ್ನು ಯೂಸುಫ್ (43ನೇ ನಿ.), ಜೋಗ ಸಿಂಗ್ (37ನೇ ನಿ.) ಮತ್ತು ಅರ್ಜುನ್ ಹಾಲಪ್ಪ (68ನೇ ನಿ.) ಗಳಿಸಿದರು.ಫೈನಲ್ ಹಣಾಹಣಿಯಲ್ಲಿ ಪಂಜಾಬ್ ಮತ್ತು ಏರ್ ಇಂಡಿಯಾ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.