ಸೋಮವಾರ, ಅಕ್ಟೋಬರ್ 21, 2019
24 °C

ರಾಷ್ಟ್ರೀಯ ಸುರಕ್ಷತಾ ಸಪ್ತಾಹ

Published:
Updated:

ಬೆಂಗಳೂರು: `ಅಪಘಾತದಿಂದ ಒಂದು ಇಡೀ ಕುಟುಂಬದ ಕೊಲೆ ಆಗುತ್ತದೆ~ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಹೇಳಿದರು. ಸಾರಿಗೆ ಇಲಾಖೆ ವತಿಯಿಂದ ಶುಕ್ರವಾರ ನಗರದ ಯವನಿಕ ಸಭಾಂಗಣದಲ್ಲಿ ಏರ್ಪಡಿಸಿದ್ದ  23 ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.`ಪಾಶ್ಚಿಮಾತ್ಯ ದೇಶಗಳಲ್ಲಿ ಸಾರಿಗೆಯ ಬಗ್ಗೆ ಹೆಚ್ಚಿನ ಕಾನೂನುಗಳು. ಅವುಗಳನ್ನು ಅಲ್ಲಿ ಪಾಲಿಸುವವವರಿಗೆ ಇಲ್ಲಿ ಪಾಲಿಸಲು ಮಾತ್ರ ಕಷ್ಟ. ಇಂದಿನ ಯುವಕರು ಡ್ಯ್ರಾಗ್‌ರೇಸ್, ವೀಲಿಂಗ್ ಮಾಡುತ್ತ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಒಬ್ಬನೇ ಮಗ ಇರುವ ತಂದೆ-ತಾಯಿಗಳ ಗೋಳು ಹೇಳತೀರದು~ ಎಂದು ಹೇಳಿದರು.ಸಾರಿಗೆ ಇಲಾಖೆಯು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ರಸಪ್ರಶ್ನೆಯಲ್ಲಿ ವಿಜೇತರಾದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಬಿ.ಜಿ.ಜ್ಯೋತಿ ಪ್ರಕಾಶ ಮಿರ್ಜಿ, ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಆಯುಕ್ತ ಟಿ.ಶ್ಯಾಮಭಟ್, ಜಂಟಿ ಸಾರಿಗೆ ಆಯುಕ್ತ ಎಚ್.ಜಿ.ಕುಮಾರ್ ಉಪಸ್ಥಿತರಿದ್ದರು.

Post Comments (+)