ರಾಷ್ಟ್ರೀಯ ಸೇವಾ ಯೋಜನೆ ಶಿಬಿರ

7

ರಾಷ್ಟ್ರೀಯ ಸೇವಾ ಯೋಜನೆ ಶಿಬಿರ

Published:
Updated:

ಹಾಸನ: `ಎನ್‌ಎಸ್‌ಎಸ್ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದ ರಿಂದ ಆ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ~ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ನುಡಿದರು.

 

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದವರು ತಾಲ್ಲೂಕಿನ ಕೆಂಚಟ್ಟ ಹಳ್ಳಿ ಗ್ರಾಮದಲ್ಲಿ  ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.  `ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ತಮ್ಮದೇ ಆದ ಮಹತ್ವ ಪಡೆದು ಕೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿವೆ.  ಜನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕೊಡುವ ಕಾರ್ಯವನ್ನೂ ಈ ಶಿಬಿರಗಳು ಮಾಡುತ್ತವೆ. ವಿದ್ಯಾರ್ಥಿಗಳು ಎನ್.ಎಸ್.ಎಸ್. ನಲ್ಲಿ ತೊಡಿಗಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ಮೈಗುಡಿಸಿಕೊಳ್ಳಲು ಸಾಧ್ಯ~ ಎಂದು ಹೇಳಿದರು.   ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಕೃಷ್ಣಪ್ಪ, `ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವ ಅವಕಾಶ ಎಲ್ಲ ವಿದ್ಯಾರ್ಥಿಗಳಿಗೆ ಲಭಿಸುವುದಿಲ್ಲ. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಇಂಥ ಸದವಕಾಶ ಲಭ್ಯವಾಗುತ್ತಿದ್ದು, ಇದರಿಂದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿ ಗಿಂತ ವಿಭಿನ್ನವಾಗಿರು ತ್ತಾರೆ~ ಎಂದರು.ಎನ್.ಎಸ್.ಎಸ್ ಅಧಿಕಾರಿ ಎಂ.ಕೆ. ಮಹೇಶ್, ಗ್ರಾ.ಪಂ. ಸದಸ್ಯೆ ವಸಂತಾ, ಮಾಜಿ ಸದಸ್ಯ ಕುಮಾರ್, ಗ್ರಾಮದ ಮುಖಂಡ ಮುತ್ತೇಗೌಡ, ಮಾಜಿ ಸೈನಿಕ ಅಣ್ಣಾಜಿಗೌಡ, ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಡಿ. ಶ್ರೀನಿವಾಸ್, ಉಪನ್ಯಾಸಕರಾದ ಆಂಥೋಣಿ ಮೇರಿ, ಮೋಹನ್ ಕುಮಾರ್, ಆಶಾ, ದಿಲೀಪ್ ಕುಮಾರ್ ಎಚ್.ಕೆ. ವೇದಮೂರ್ತಿ, ಲಕ್ಷ್ಮೀಕಾಂತ್ ಹಾಗೂ ದೇಹಿಕ ಶಿಕ್ಷಣ ನಿರ್ದೇಶಕ ನಾರಾಯಣ ಶೆಟ್ಟಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry