ರಾಷ್ಟ್ರೀಯ ಹಾಕಿ: ಹೊರಬಿದ್ದ ಕರ್ನಾಟಕ

7

ರಾಷ್ಟ್ರೀಯ ಹಾಕಿ: ಹೊರಬಿದ್ದ ಕರ್ನಾಟಕ

Published:
Updated:

ಭೋಪಾಲ್ (ಐಎಎನ್‌ಎಸ್): ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಆಶ್ರಯದ ಮಹಿಳೆಯರ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚಂಡಿಗಡ ಎದುರು ಸೋಲು ಕಂಡು ಚಾಂಪಿಯನ್‌ಷಿಪ್‌ನಿಂದ ಹೊರ ಬಿದ್ದಿತು.ಗುರುವಾರ ನಡೆದ ಪಂದ್ಯದಲ್ಲಿ ಚಂಡಿಗಡ 3-2ಗೋಲುಗಳಿಂದ ಕರ್ನಾಟಕವನ್ನು ಮಣಿಸಿತು. ವಿಜಯಿ ತಂಡದ ರಜಿನಿ 18 ಹಾಗೂ 26ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿದರೆ, ರೀನಾ (59ನೇ ನಿ.) ಮೂರನೇ ಕಲೆ ಹಾಕಿದರು. ಕರ್ನಾಟಕದ ಚೈತ್ರಾ (30ನೇ ನಿ.) ಹಾಗೂ ಕುಲ್ಸುಂಬಿ 45ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದ್ದರು.`ಜಿ~ ಗುಂಪಿನಲ್ಲಿರುವ ಚಂಡಿಗಡ ಮೂರನೇ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮಧ್ಯಪ್ರದೇಶ ಹಾಕಿ ಅಕಾಡೆಮಿ, ರೈಲ್ವೆಸ್ ಮತ್ತು ಒಡಿಶಾ ತಂಡಗಳೂ ಎಂಟರ ಘಟ್ಟ ಪ್ರವೇಶಿಸಿವೆ.ತಿರುವಂತಪುರ ವರದಿ: ಕರ್ನಾಟಕ ತಂಡದವರು ತಿರುವನಂತಪುರದಲ್ಲಿ  ನಡೆಯುತ್ತಿರುವ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕಿಯರ (ದಕ್ಷಿಣ ವಲಯ) ಹಾಕಿ ಚಾಂಪಿಯನ್‌ಷಿಪ್‌ನಲ್ಲಿ 3-1ಗೋಲುಗಳಿಂದ ತಮಿಳುನಾಡು ತಂಡವನ್ನು ಮಣಿಸಿದರು.ವಿಜಯಿ ತಂಡದ ಕಾವೇರಮ್ಮ (19ನೇ ನಿ.), ಸಿಂಧು (29ನೇ ನಿ.) ಹಾಗೂ ಸ್ಫೂರ್ತಿ (48ನೇ ನಿ.) ಗೋಲು ಕಲೆ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry