ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ;ಭದ್ರತಾ ಸಿಬ್ಬಂದಿ ಕೊಲೆ

7

ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ;ಭದ್ರತಾ ಸಿಬ್ಬಂದಿ ಕೊಲೆ

Published:
Updated:

ಬೆಂಗಳೂರು: ನಗರದ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ (ಎನ್‌ಡಿಆರ್‌ಐ) ಭದ್ರತಾ ಸಿಬ್ಬಂದಿಯಾಗಿದ್ದ ನೆಲ್ಸನ್ ನರೋನಾ (55) ಎಂಬುವರನ್ನು ಅವರ ಸಹೋದ್ಯೋಗಿಗಳೇ ಸೋಮವಾರ ರಾತ್ರಿ ಕೊಲೆ ಮಾಡಿದ್ದಾರೆ.ಬನಶಂಕರಿ ನಿವಾಸಿಯಾದ ನೆಲ್ಸನ್ ಅವರು ವಿಜಯನಗರದ ಖಾಸಗಿ ಭದ್ರತಾ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಸೆಕ್ಯುರಿಟಿ ಏಜೆನ್ಸಿಯವರು ಅವರನ್ನು ಎನ್‌ಡಿಆರ್‌ಐನಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.ನೆಲ್ಸನ್, ಎನ್‌ಡಿಆರ್‌ಐನಲ್ಲೇ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಇತರೆ ಭದ್ರತಾ ಸಿಬ್ಬಂದಿಗಳ ಜತೆ ರಾತ್ರಿ ಮದ್ಯಪಾನ ಮಾಡಿದ್ದರು. ಈ ವೇಳೆ ಪರಸ್ಪರರ ನಡುವೆ ವಾಗ್ವಾದ ನಡೆದು ಜಗಳವಾಗಿದೆ. ಈ ಹಂತದಲ್ಲಿ ಕೆಲ ಸಿಬ್ಬಂದಿ, ನೆಲ್ಸನ್‌ಗೆ ಥಳಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸರಗಳವು: ಇಂದಿರಾನಗರ ಎರಡನೇ ಹಂತದಲ್ಲಿ ದುಷ್ಕರ್ಮಿಯೊಬ್ಬ ಮಂಗಳವಾರ ನಸುಕಿನಲ್ಲಿ ತಮಿಳ್ ಸೆಲ್ವಿ ಎಂಬ ಮಹಿಳೆಯ ಚಿನ್ನದ ಸರವನ್ನು ದೋಚಿದ್ದಾನೆ. ಇಂದಿರಾನಗರ ಒಂಬತ್ತನೇ ಅಡ್ಡರಸ್ತೆ ನಿವಾಸಿಯಾದ ಸೆಲ್ವಿ ಅವರು ಮನೆಯ ಮುಂಭಾಗದ ನಲ್ಲಿಯಲ್ಲಿ ಬೆಳಗಿನ ಜಾವ ನೀರು ಹಿಡಿಯುತ್ತಿದ್ದಾಗ ಕಿಡಿಗೇಡಿಯೊಬ್ಬ ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾನೆ. ಸರದ ಮೌಲ್ಯ ಸುಮಾರು 50 ಸಾವಿರ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿರಾನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry