ರಾಷ್ಟ್ರ ಮಟ್ಟದ ಶಿಕ್ಷಕಿಯರ ಸಮ್ಮೇಳನ

7

ರಾಷ್ಟ್ರ ಮಟ್ಟದ ಶಿಕ್ಷಕಿಯರ ಸಮ್ಮೇಳನ

Published:
Updated:

ಆಲಮಟ್ಟಿ: ರಾಷ್ಟ್ರೀಯ ಶಿಕ್ಷಕರ ಸಂಘ (ಎಸ್‌ಟಿಎಫ್‌ಐ) ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದೊಂದಿಗೆ  2ನೇ ರಾಷ್ಟ್ರ ಮಟ್ಟದ ಮಹಿಳಾ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮ್ಮೇಳನವನ್ನು ಇದೇ 29 ಮತ್ತು 30ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಏರ್ಪಡಿಸಲಾಗಿದೆ.ರಾಜ್ಯದಲ್ಲಿ ನಡೆಯುತ್ತಿರುವ ಈ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ 800 ಕ್ಕೂ ಹೆಚ್ಚು ಮಹಿಳಾ ಶಿಕ್ಷಕಿಯರು ಬೇರೆ, ಬೇರೆ ರಾಜ್ಯಗಳಿಂದ ಆಗಮಿಸಲಿದ್ದು, ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಮಹಿಳಾ ಶಿಕ್ಷಕಿಯರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಚಂದ್ರಶೇಖರ ನುಗ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಮ್ಮೇಳನವನ್ನು ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ ಉದ್ಘಾಟಿಸುವರು. ರಾಷ್ಟ್ರೀಯ ಮಕ್ಕಳು ಹಕ್ಕು ಮತ್ತು ರಕ್ಷಣಾ ಆಯೋಗದ ಅಧ್ಯಕ್ಷ ಶಾಂತಾಸಿಂಹ ಮತ್ತು ಎಸ್‌ಟಿಎಫ್‌ಐ ಕಾರ್ಯದರ್ಶಿ ಕೆ. ರಾಜೇಂದ್ರ, ಎಸ್‌ಟಿಎಫ್‌ಐ ಅಧ್ಯಕ್ಷ ಅಭಿಜಿತ ಮುಖರ್ಜಿ, ಸೀಮಾ ದತ್ತ, ರಮಾದೇವಿ, ಮಂಜುಳಾ ಭಾಗವಹಿಸಲಿದ್ದಾರೆ. ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸುವರು. ಇದಕ್ಕೂ ಮುನ್ನ ಬೆಂಗಳೂರು ಟೌನ್ ಹಾಲ್‌ನಿಂದ ಶಿಕ್ಷಕರ ಸದನದವರೆಗೆ ಬೃಹತ್ ರ‌್ಯಾಲಿ ನಡೆಯಲಿದೆ.ಎರಡು ದಿನಗಳ ಕಾಲ ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ. ಮಹಿಳಾ ಶಿಕ್ಷಕಿಯರ ಶೈಕ್ಷಣಿಕ ಸಮಸ್ಯೆಗಳು, ಮಹಿಳೆಯರ ಸಮಸ್ಯೆಗಳು, ಕೆಲಸನಿರತ ಮಹಿಳೆಯರ ಸಮಸ್ಯೆಗಳು ಹೀಗೆ ವಿವಿಧ ಗೋಷ್ಠಿಗಳು ನಡೆಯಲಿದ್ದು, ಬೇರೆ ಬೇರೆ ರಾಜ್ಯಗಳ ಶೈಕ್ಷಣಿಕ ಪದ್ಧತಿಯ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry