ರಾಷ್ಪ್ರಪತಿ ಆಯ್ಕೆಗೆ ಮತದಾನ ಆರಂಭ

ಶನಿವಾರ, ಜೂಲೈ 20, 2019
28 °C

ರಾಷ್ಪ್ರಪತಿ ಆಯ್ಕೆಗೆ ಮತದಾನ ಆರಂಭ

Published:
Updated:

ನವದೆಹಲಿ (ಐಎಎನ್‌ಎಸ್): ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಗುರುವಾರ ಬೆಳಿಗ್ಗೆ ನವದೆಹಲಿ ಸೇರಿದಂತೆ ಎಲ್ಲಾ ರಾಜ್ಯದ ರಾಜಧಾನಿಗಳಲ್ಲಿ ಆರಂಭವಾಗಿದೆ.ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಮತದಾನ ಪ್ರಾರಂಭವಾಯಿತು. ಎಲ್ಲಾ ರಾಜ್ಯದ ರಾಜಧಾನಿಗಳಲ್ಲಿರುವ ವಿಧಾನಸಭೆಗಳಲ್ಲಿ ಮತದಾನ ಪ್ರಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, ಭಾನುವಾರ ಮತ ಎಣಿಕೆ ನಡೆಯಲಿದೆ.ಯುಪಿಎ ಅಭ್ಯರ್ಥಿ ಪ್ರಣವ್‌ಮುಖರ್ಜಿ ಹಾಗೂ ಎನ್‌ಡಿಎ ಅಭ್ಯರ್ಥಿ ಪಿ.ಎ. ಸಂಗ್ಮಾ  ಸ್ಪರ್ಧಿಸುತ್ತಿರುವ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಬೇಕಾಗಿರುವ ಜನಪ್ರತಿನಿಧಿಗಳ ಒಟ್ಟು ಸಂಖ್ಯೆ 4896. ಇವರಲ್ಲಿ 776 ಸಂಸದರಾಗಿದ್ದರೆ, ಉಳಿದ 4120 ಮಂದಿ ರಾಜ್ಯ ವಿಧಾನಸಭಾ ಶಾಸಕಾಂಗದ ಸದಸ್ಯರಾಗಿದ್ದಾರೆ. ಒಟ್ಟಾರೆ ಇವರ ಒಟ್ಟು ಮತಮೌಲ್ಯ 10,97,012.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry