`ರಾಸಾಯನಿಕ ಅಸ್ತ್ರಗಳ ಒಪ್ಪಂದಕ್ಕೆ ಬದ್ಧ'

7

`ರಾಸಾಯನಿಕ ಅಸ್ತ್ರಗಳ ಒಪ್ಪಂದಕ್ಕೆ ಬದ್ಧ'

Published:
Updated:

ಡಮಾಸ್ಕಸ್ (ಐಎಎನ್‌ಎಸ್): ರಾಸಾಯನಿಕ ಅಸ್ತ್ರಗಳ ನಾಶ ಸಂಬಂಧ ರಷ್ಯಾ ಹಾಗೂ ಅಮೆರಿಕ ನಡುವಣ ಒಪ್ಪಂದಕ್ಕೆ ಸಿರಿಯಾ ಬದ್ಧ ಎಂದು ಅಧ್ಯಕ್ಷ ಬಷರ್ ಅಲ್ ಅಸಾದ್ ಹೇಳಿರುವುದಾಗಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

`ರಾಸಾಯನಿಕ ಅಸ್ತ್ರಗಳ ಉತ್ಪಾದನೆ, ದಾಸ್ತಾನು ಹಾಗೂ ಹಂಚಿಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಮಾಡಿಕೊಂಡಿರುವ ಒಪ್ಪಂದವನ್ನು ಸಿರಿಯಾ ಪಾಲಿಸಲಿದೆ' ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಸಾದ್ ಒತ್ತಿ ಹೇಳಿದ್ದಾರೆ.

ದಾಸ್ತಾನು ಮಾಡಲಾಗಿರುವ ರಾಸಾಯನಿಕ ಅಸ್ತ್ರಗಳ ನಾಶಕ್ಕೆ ಒಂದು ಬಿಲಿಯನ್ ಡಾಲರ್ (ಸುಮಾರು 610 ಕೋಟಿ ರೂಪಾಯಿ) ವೆಚ್ಚವಾಗಲಿದ್ದು, ಅದಕ್ಕಾಗಿ ಸುಮಾರು ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry