ಬುಧವಾರ, ಜೂನ್ 16, 2021
22 °C

ರಾಹುಲ್‌ಗೆ ಯಾರೂ ಸಾಟಿಯಿಲ್ಲ: ಸಚಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ರಾಹುಲ್ ದ್ರಾವಿಡ್ ಅವರಂತಹ ಕಲಾತ್ಮಕ ಕ್ರಿಕೆಟಿಗನನ್ನು ನಾನು ಇದುವರೆಗೂ ನೋಡಿಲ್ಲ. ಅವರಿಗೆ ಯಾರೂ ಸಾಟಿಯಲ್ಲ. ಅವರಿಗೆ ಅವರೇ ಸಾಟಿ~ ಎಂದು ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.ಟೆಸ್ಟ್ ಕ್ರಿಕೆಟ್‌ಗೆ ದ್ರಾವಿಡ್ ಶುಕ್ರವಾರ ನಿವೃತ್ತಿ ಪ್ರಕಟಿಸುವ ಸಾಧ್ಯತೆ ಇದೆ. ಆದ್ದರಿಂದ ಸಚಿನ್ `ದ ವಾಲ್~ ಜೊತೆಗಿನ ನೆನಪನ್ನು ಮೆಲುಕು ಹಾಕಿದ್ದಾರೆ.`ದ್ರಾವಿಡ್ ಅವರೊಂದಿಗೆ ಸಾಕಷ್ಟು ಸಲ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದೇನೆ. ಇನ್ನು ಮುಂದೆ ಅವರನ್ನು `ಮಿಸ್~ ಮಾಡಿಕೊಳ್ಳುತ್ತಿದ್ದೇನೆ. ಅಂಗಳದಲ್ಲೂ ಸಲಹೆ ಪಡೆದಿದ್ದೇನೆ. ಇದರ ಜೊತೆಗೆ ನನ್ನ ವೃತ್ತಿ ಜೀವನದ ಮಧುರ ಕ್ಷಣಗಳನ್ನು ಸವಿದಿದ್ದೇನೆ. ನಾನು ಶತಕ ಗಳಿಸಿದಾಗ ಹಲವು ಸಲ ನನ್ನೊಂದಿಗೆ ದ್ರಾವಿಡ್ ಇದ್ದರು~ ಎಂದು ಹಳೆಯ ನೆನಪುಗಳನ್ನು ಮುಂಬೈಕರ್ ಸ್ಮರಿಸಿದ್ದಾರೆ.ನಿವೃತ್ತಿಗೆ ಇದು ಸಕಾಲ: `ನಿವೃತ್ತಿ ನಿರ್ಧಾರ ಪ್ರತಿ ಕ್ರೀಡಾಪಟುವಿನ ವೈಯಕ್ತಿಕ ನಿರ್ಧಾರ. ಅದರಲ್ಲಿ ಎರಡು ಮಾತಿಲ್ಲ. ಆದರೆ, ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಲು ಇದು ಸಕಾಲ~ ಎಂದು ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅಭಿಪ್ರಾಯ ಪಟ್ಟಿದ್ದಾರೆ.`ದ್ರಾವಿಡ್ ಕೇವಲ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲ. ಆಟದ ರಾಯಭಾರಿಯಂತೆ, ಯುವ ಆಟಗಾರರಿಗೆ ಸ್ಫೂರ್ತಿಯ ಚಿಲುಮೆ. ಯುವಕರಿಗೆ ದಾರಿದೀಪ~ ಎಂದು ಅವರು ಶ್ಲಾಘಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.