ಭಾನುವಾರ, ಜನವರಿ 19, 2020
26 °C

ರಾಹುಲ್‌ ವಿರುದ್ಧ ಎಎಪಿ ಕುಮಾರ್‌ ವಿಶ್ವಾಸ್‌ ಸ್ಪರ್ಧೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಪ್ರದರ್ಶನ ದಾಖಲಿಸಿರುವ ಆಮ್‌ ಆದ್ಮಿ ಪಕ್ಷ ಈಗ ಲೋಕಸಭೆ ಚುನಾವಣೆಯತ್ತ ಗಮನ ಹರಿಸಿದೆ. ಪಕ್ಷದ ನಾಯಕರಲ್ಲೊಬ್ಬರಾಗಿರುವ ಕುಮಾರ್‌ ವಿಶ್ವಾಸ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸುವ ಬಗ್ಗೆ ಆಮ್‌ ಆದ್ಮಿ ಪಕ್ಷ ಸುಳಿವು ನೀಡಿದೆ.ರಾಹುಲ್‌ ಗಾಂಧಿ ವಿರುದ್ಧ ಕುಮಾರ್‌ ವಿಶ್ವಾಸ್‌ ಸ್ಪರ್ಧಿಸಬಹುದು ಎಂದು ದೆಹಲಿಯ ಪತ್‌ಪರ್‌ಗಂಜ್‌ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಪಕ್ಷದ ಮುಖಂಡ ಮನೀಶ್‌ ಸಿಸೋಡಿಯ ಹೇಳಿದ್ದಾರೆ.ಪಕ್ಷವು ಎಷ್ಟು ರಾಜ್ಯಗಳಲ್ಲಿ ಮತ್ತು ಎಷ್ಟು ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬ ಬಗ್ಗೆ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಯಾವುದೇ ಮಾಹಿತಿ ನೀಡಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಹಣದ ಅವಶ್ಯಕತೆ ಇದ್ದು ಜನರು ಉದಾರವಾಗಿ ದೇಣಿಗೆ ನೀಡಬೇಕು ಎಂದು ಕೇಜ್ರಿವಾಲ್‌ ವಿನಂತಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)