ರಾಹುಲ್ ಗಾಂಧಿಗೆ ಸಮನ್ಸ್

7

ರಾಹುಲ್ ಗಾಂಧಿಗೆ ಸಮನ್ಸ್

Published:
Updated:
ರಾಹುಲ್ ಗಾಂಧಿಗೆ ಸಮನ್ಸ್

ಚಂಡೀಗಡ (ಐಎಎನ್‌ಎಸ್): ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಹೊರಡಿಸಿರುವ ಚಂಡೀಗಡದ ನ್ಯಾಯಾಲಯ, ಸೆಪ್ಟೆಂಬರ್ 19ರಂದು ಹಾಜರಾಗುವಂತೆ ಸೂಚಿಸಿದೆ.ರಾಹುಲ್ ಅವರಿಗೆ ನೇರವಾಗಿ ಸಮನ್ಸ್ ತಲುಪಿಸಲು ಸೂಚಿಸಲಾಗಿದೆ. ಈ ಮುಂಚೆಯು ನ್ಯಾಯಾಲಯ ಸಮನ್ಸ್ ಹೊರಡಿಸಿತ್ತು.

ಆದರೆ, ಎಂಟು ಸಲವೂ ಅವರಿಗೆ ಸಮನ್ಸ್ ನೀಡಿರಲಿಲ್ಲ. ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಅನ್ಯ ರಾಜ್ಯಗಳಿಗೆ ಕೆಲಸ ಮತ್ತು ಭಿಕ್ಷೆ ಬೇಡಲು ಹೋಗುತ್ತಾರೆ ಎಂದು 2011ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಅರವಿಂದ್ ಠಾಕೂರ್ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry