ರಾಹುಲ್ ವಿರುದ್ಧ ಎಫ್‌ಐಆರ್: ಹೈಕೋರ್ಟ್‌ಗೆ ಮೇಲ್ಮನವಿ

7

ರಾಹುಲ್ ವಿರುದ್ಧ ಎಫ್‌ಐಆರ್: ಹೈಕೋರ್ಟ್‌ಗೆ ಮೇಲ್ಮನವಿ

Published:
Updated:

ಕಾನ್ಪುರ(ಐಎಎನ್‌ಎಸ್): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಅರ್) ದಾಖಲಿಸುವುದರ ಹಿಂದೆ ಮುಖ್ಯಮಂತ್ರಿ ಮಾಯಾವತಿ ಕೈವಾಡ ಇದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.

ಚುನಾವಣಾ ನಿಯಮ ಉಲ್ಲಂಘಿಸಿ ರೋಡ್ ಶೋ ನಡೆಸಿದ್ದ ರಾಹುಲ್ ವಿರುದ್ಧ ಸೆಕ್ಷನ್ 144ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಕ್ಕೆ ಕೋಪಗೊಂಡಿರುವ ಕಾಂಗ್ರೆಸ್, ಪ್ರಕರಣ ಹಿಂದಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.

`ಕಾಂಗ್ರೆಸ್‌ನ ಯಶಸ್ವಿ ಚುನಾವಣಾ ಪ್ರಚಾರಕ್ಕೆ ಹೆದರಿದ ಮಾಯಾವತಿ ರಾಹುಲ್ ವಿರುದ್ಧ ಪ್ರಕರಣ ದಾಖಲಾಗುವಂತೆ ನೋಡಿಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದ ಬಗ್ಗೆ ಚುನಾವಣಾ ಆಯೋಗ ಯಾವುದೇ ನೋಟಿಸ್ ನೀಡಿಲ್ಲ.

ಈ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು~ ಎಂದು ಕಾಂಗ್ರೆಸ್ ವರಿಷ್ಠ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry