ರಾಹುಲ್ ವಿರುದ್ಧ ಮುದ್ರಾಂಕ ಶುಲ್ಕ ವಂಚನೆ ಆರೋಪ

7

ರಾಹುಲ್ ವಿರುದ್ಧ ಮುದ್ರಾಂಕ ಶುಲ್ಕ ವಂಚನೆ ಆರೋಪ

Published:
Updated:

ಚಂಡೀಗಡ: ಕಾಂಗ್ರೆಸ್ ಪ್ರಧಾನ ರ್ಯದರ್ಶಿ ರಾಹುಲ್ ಗಾಂಧಿ ಅವರು ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಖರೀದಿಸಿರುವ ಕೃಷಿ ಭೂಮಿಗೆ ನಿಗದಿತ ಮುದ್ರಾಂಕ ಶುಲ್ಕ ಪಾವತಿದೆ ವಂಚಿಸಿದ್ದಾರೆ ಎಂದು ಹರಿಯಾಣ ಮಾಜಿ ಮುಖ್ಯಮಂತ್ರಿ ಹಾಗೂ ಐಎನ್‌ಎಲ್‌ಡಿ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಆರೋಪಿಸಿದ್ದಾರೆ.ಇಲ್ಲಿನ ಹಸನ್‌ಪುರ ಗ್ರಾಮದಲ್ಲಿ ರಾಹುಲ್ ಅವರು ಸುಮಾರು 6.5 ಎಕರೆ ಕೃಷಿ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಅತಿ ಕಡಿಮೆ ಬೆಲೆಗೆ ಖರೀದಿಸಿದ್ದರು. 2008 ಮಾರ್ಚ್ 3ರಂದು ನಡೆದ ಈ ಭೂಮಿಯ ನೋಂದಣಿ ವೇಳೆ ಎಕರೆಗೆ ನಿಗದಿತ ಮುದ್ರಾಂಕ ಶುಲ್ಕ 8 ಲಕ್ಷಕ್ಕೆ ಬದಲಾಗಿ, ರಾಹುಲ್ ಅವರು ಕೇವಲ 1.5 ಲಕ್ಷ ಪಾವತಿಸ್ದ್ದಿದಾರೆ ಎಂದು ಚೌಟಾಲ ದೂರಿದ್ದಾರೆ.ಅಲ್ಲದೆ, ಡಿಎಲ್‌ಎಫ್ ಸಂಸ್ಥೆ ಜತೆಗಿನ ಭೂ ಖರೀದಿ ಅವ್ಯವಹಾರದ ಆರೋಪ ಎದುರಿಸುತ್ತಿರುವ ರಾಹುಲ್ ಸಹೋದರಿ ಪತಿ ರಾಬರ್ಟ್ ವಾದ್ರಾ ಕೂಡ ಇದೇ ಗ್ರಾಮದಲ್ಲಿ 9 ಎಕರೆ ಭೂಮಿ ಖರೀದಿಸಿ ನಿಗದಿತ ಮುದ್ರಾಂಕ ಶುಲ್ಕ ಪಾವತಿಸದೇ ವಂಚಿಸಿದ್ದಾರೆ. ರಾಹುಲ್ ಮತ್ತು ವಾದ್ರಾ ಇಬ್ಬರೂ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿರುವ ಕೃಷಿ ಭೂಮಿಯ ಅಂದಿನ ಮಾರುಕಟ್ಟೆ ಬೆಲೆ ಅತ್ಯಂತ ಹೆಚ್ಚಿನದಾಗಿತ್ತು ಎಂದು ಓಂ  ಚೌಟಾಲಾ ದೂರಿದ್ದಾರೆ.ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು, `ವಾದ್ರಾ- ಡಿಎಲ್‌ಎಫ್ ನಡುವಿನ ವಿವಾದಿತ ಭೂ ವ್ಯವಹಾರವನ್ನು ಅನೂರ್ಜಿತಗೊಳಿಸಿದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರ ವರ್ಗಾವಣೆಯನ್ನು ಶಿಕ್ಷೆಯಲ್ಲ~ ಎಂದಿದ್ದಾರೆ.`ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ತನಿಖೆ ನಡೆಯುತ್ತಿದೆ. ಖೇಮ್ಕಾ ಅವರು ಪ್ರಾಮಾಣಿಕ ಅಧಿಕಾರಿ ಎಂಬುದನ್ನು ನಾನು ಒಪ್ಪುತ್ತೇನೆ.ಯಾರೇ ಆಗಲಿ, ಅಪ್ರಾಮಾಣಿಕರು ಎಂದು ಸಾಬೀತಾಗುವವರೆಗೆ ಪ್ರಾಮಾಣಿಕರೇ ಆಗಿರುತ್ತಾರೆ~ ಎಂದು ಮಾರ್ಮಿಕವಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry