ಶುಕ್ರವಾರ, ಮೇ 27, 2022
30 °C

ರಾಹುಲ್ ಸಭೆ: ಪಿಸ್ತೂಲ್ ಇದ್ದ ಯುವಕನ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೇಥಿ (ಪಿಟಿಐ): ಸಂಸದ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದಾಗ ಪಿಸ್ತೂಲಿನೊಂದಿಗೆ ಒಳ ಪ್ರವೇಶಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.ಪರವಾನಗಿ ಇರುವ ಪಿಸ್ತೂಲು ಹೊಂದಿದ್ದ ಪ್ರದೀಪ್‌ಕುಮಾರ್ ಸೋನಿ ಪೊಲೀಸರ ವಶವಾಗಿರುವ ಆರೋಪಿ. ತನ್ನ ತಂದೆ ಮತ್ತು ಸಹೋದರನನ್ನು ಮೂರು  ತಿಂಗಳ ಹಿಂದೆ ಕೊಲೆ ಮಾಡಿದ್ದು, ಈ ಸಂಬಂಧ ರಾಹುಲ್‌ಗೆ ಅರ್ಜಿ ಸಲ್ಲಿಸಲು ಬಂದಿದ್ದಾಗಿ ಯುವಕ ತನಿಖೆ ವೇಳೆ ತಿಳಿಸಿದ್ದಾನೆ. ಕೆಲವರು ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದರು. ಆತ್ಮರಕ್ಷಣೆಗೆ ಪಿಸ್ತೂಲು ಇಟ್ಟುಕೊಂಡ್ದ್ದಿದೆನೆಂದೂ ತಿಳಿಸಿದ್ದಾನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.