ರಿಯಲ್ ಎಸ್ಟೇಟ್ ಇಳಿಮುಖ: ಬೆಂಗಳೂರು ಮಾರುಕಟ್ಟೆ ಸ್ಥಿರ:ಆರ್ಥಿಕ ಅಸ್ಥಿರತೆ: ಗೃಹ ಮಾರಾಟ ಇಳಿಕೆ

7

ರಿಯಲ್ ಎಸ್ಟೇಟ್ ಇಳಿಮುಖ: ಬೆಂಗಳೂರು ಮಾರುಕಟ್ಟೆ ಸ್ಥಿರ:ಆರ್ಥಿಕ ಅಸ್ಥಿರತೆ: ಗೃಹ ಮಾರಾಟ ಇಳಿಕೆ

Published:
Updated:
ರಿಯಲ್ ಎಸ್ಟೇಟ್ ಇಳಿಮುಖ: ಬೆಂಗಳೂರು ಮಾರುಕಟ್ಟೆ ಸ್ಥಿರ:ಆರ್ಥಿಕ ಅಸ್ಥಿರತೆ: ಗೃಹ ಮಾರಾಟ ಇಳಿಕೆ

ನವದೆಹಲಿ (ಪಿಟಿಐ): ಆರ್ಥಿಕ ಅಸ್ಥಿರತೆ ಮತ್ತು ಬಡ್ಡಿ ದರ ಏರಿಕೆಯಿಂದ ಗೃಹ ಮತ್ತು ನಿವೇಶನ ಮಾರಾಟ ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕ ಅವಧಿಯಲ್ಲಿ ಶೇ 50ರಷ್ಟು ಇಳಿಕೆ ಕಂಡಿದೆ ಎಂಬುದು `ಪ್ರಾಪ್ ಈಕ್ವಿಟಿ~ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.ಮುಂಬೈ ಅಗ್ಗ:ಬೇಡಿಕೆ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಅಹಮದಾಬಾದ್, ಮುಂಬೈ ಸೇರಿದಂತೆ ಪ್ರಮುಖ ಮಹಾ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಗೃಹ, ನಿವೇಶನ ದರವನ್ನು ಶೇ 20ರಷ್ಟು ತಗ್ಗಿಸಿದ್ದಾರೆ. ಮುಂಬೈನಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಗರಿಷ್ಠ ಮಟ್ಟದಲ್ಲಿ ಶೇ 58ರಷ್ಟು ಕುಸಿದಿದೆ. ದೆಹಲಿಯಲ್ಲಿ ಶೇ 57 ರಷ್ಟು ತಗ್ಗಿದೆ.ಬೆಂಗಳೂರು ಸ್ಥಿರ: ದೇಶದ ಮೂರನೆಯ ಅತಿ ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾದ ಬೆಂಗಳೂರಿನಲ್ಲಿ ಗೃಹ, ನಿವೇಶನ ಖರೀದಿ ಶೇ 18ರಷ್ಟು ತಗ್ಗಿದೆ. ಆದರೆ, ದಹಲಿ ಮತ್ತು ಮುಂಬೈಗೆ ಹೋಲಿಸಿದರೆ ಬೆಂಗಳೂರಿನ ಮಾರುಕಟ್ಟೆ  ಬಹುತೇಕ ಸ್ಥಿರವಾಗಿದೆ ಎಂದು ಈ ಅಧ್ಯಯನ ಹೇಳಿದೆ.ದೇಶದ ಆರ್ಥಿಕ ವೃದ್ಧಿ ದರ ಕುಸಿದಿರುವುದು, ಹಣದುಬ್ಬರ, ಬ್ಯಾಂಕ್ ಬಡ್ಡಿ ದರ ಹೆಚ್ಚಳ ಇತ್ಯಾದಿ ಕಾರಣಗಳು ರಿಯಲ್ ಎಸ್ಟೇಟ್ ವಲಯದ ಹಿನ್ನಡೆಗೆ ಪ್ರಮುಖ ಕಾರಣ ಎಂದು ಪ್ರಾಪ್ ಈಕ್ವಿಟಿ `ಸಿಇಒ~ ಸಮೀರ್ ಜಸುಜಾ ಅಭಿಪ್ರಾಯಪಟ್ಟಿದ್ದಾರೆ.2011-12ನೇ ಹಣಕಾಸು ವರ್ಷದ  ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಮಹಾ ನಗರಗಳಲ್ಲಿ ಒಟ್ಟು 35,420 ಗೃಹಗಳು ಮಾರಾಟವಾಗಿದ್ದವು. ಪ್ರಸಕ್ತ ಅವಧಿಯಲ್ಲಿ 15,104ಕ್ಕೆ ಇಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry