ರಿಯಾನ್ ಮಿನಿಥಾನ್‌

7

ರಿಯಾನ್ ಮಿನಿಥಾನ್‌

Published:
Updated:

ಯಲಹಂಕದ  ರಿಯಾನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಇತ್ತೀಚೆಗೆ 109ನೇ ರೇಸ್‌ ಆಫ್ ರಿಯಾನ್ ಮಿನಿಥಾನ್‌ ಆಯೋಜಿಸಲಾಗಿತ್ತು. 1998ರಿಂದ ದೆಹಲಿ, ಮುಂಬೈ, ಜೈಪುರ ಮುಂತಾದ ಮುಖ್ಯ ನಗರಗಳಲ್ಲಿ ಈ ಮಿನಿಥಾನ್‌ ಆಯೋಜಿಸಲಾಗುತ್ತಿದೆ.

ಬೆಂಗಳೂರಿನ ಸುಮಾರು 26 ಶಾಲೆಗಳಿಂದ 4,500 ವಿದ್ಯಾರ್ಥಿಗಳು ಮಿನಿಥಾನ್‌ನಲ್ಲಿ ಭಾಗವಹಿಸಿದ್ದರು. 12 ವರ್ಷದೊಳಗಿನ ಬಾಲಕರು, ಬಾಲಕಿಯರ ವಿಭಾಗದ ಮಕ್ಕಳಿಗೆ 2 ಕಿ.ಮೀ. ನಡಿಗೆ, 14 ವರ್ಷ ವಯೋಮಾನದವರಿಗೆ ಮೂರು ಕಿ.ಮೀ, 16 ವರ್ಷದ ಬಾಲಕರಿಗೆ ನಾಲ್ಕು ಕಿ.ಮೀ. ನಡಿಗೆ ಆಯೋಜಿಸಲಾಗಿತ್ತು.

ಯಲಹಂಕದ ರಿಯಾನ್‌ ಇಂಟರ್‌ನ್ಯಾಷನಲ್‌ ಶಾಲೆ 38 ಅಂಕಗಳಿಂದ ಪ್ರಥಮ ಸ್ಥಾನ ಗಳಿಸಿತು. ಕುಂದನಹಳ್ಳಿ ರಿಯಾನ್‌ ಇಂಟರ್‌ನ್ಯಾಷನಲ್‌ ಶಾಲೆ 25 ಅಂಕಗಳಿಂದ ದ್ವಿತೀಯ ಸ್ಥಾನ ಮತ್ತು ಡೆಲ್ಲಿ ಪಬ್ಲಿಕ್‌ ಸ್ಕೂಲ್‌ 23 ಅಂಕಗಳಿಂದ ತೃತೀಯ ಸ್ಥಾನ ಪಡೆಯಿತು. ಒಟ್ಟು 30 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.  z

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry