ಗುರುವಾರ , ಜೂನ್ 24, 2021
29 °C

ರಿಯಾಯಿತಿಗಳಿಗೆ ಮರುಳಾಗದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿನ ಬಳಕೆಗೆ ತಯಾರಿಸುವ 220 ವೋಲ್ಟ್ 50 ಹರ್ಟ್ಜ್ ಉಪಕರಣವನ್ನು ಯಾವುದೇ ಕಾರಣಕ್ಕೂ ಸ್ಟೆಪ್ ಡೌನ್ ಟ್ರಾನ್ಸ್‌ಫಾರ್ಮರ್ ಹಾಕಿ ಅಮೆರಿಕದಲ್ಲಿ ಬಳಸಬಾರದು. ಸ್ಟೆಪ್ ಡೌನ್ ಟ್ರಾನ್ಸ್‌ಫಾರ್ಮರ್ ವೋಲ್ಟೇಜ್ ಸಮಸ್ಯೆಗೆ ಪರಿಹಾರ ಒದಗಿಸುತ್ತದೆಯಾದರೂ ಕಂಪನ ಸಮಸ್ಯೆಯನ್ನು ನೀಗುವುದಿಲ್ಲ.ಒಂದೊಮ್ಮೆ ಇದನ್ನು ಉಪೇಕ್ಷಿಸಿ ಉಪಯೋಗಿಸಿದರೆ ಮೋಟಾರ್ ಸುಟ್ಟುಹೋಗುವ ಸಂಭವವೂ ಇರುತ್ತದೆ.

ವಾರಂಟಿ: ಕೆಲವು ತಯಾರಕರು `ತಯಾರಿಕಾ ಲೋಪ~ಗಳಿಗೆ ಸಂಬಂಧಿಸಿದಂತೆ ಉತ್ಪನ್ನಕ್ಕೆ ಒಂದು ವರ್ಷ ವಾರಂಟಿ ನೀಡುತ್ತಾರೆ. ಇನ್ನು ಕೆಲವರು ಉಪಕರಣದ ಬೇರೆ ಬಿಡಿ ಭಾಗಗಳಿಗೆ ಎರಡು ವರ್ಷ ವಾರಂಟಿ ನೀಡಿ, ಮೋಟಾರ್‌ಗೆ ಐದು ವರ್ಷ ವಾರಂಟಿ ಒದಗಿಸುತ್ತಾರೆ. ಇನ್ನು ಕೆಲವು ತಯಾರಕರು ಇಡೀ ಉಪಕರಣಕ್ಕೆ ಐದು ವರ್ಷ ವಾರಂಟಿ ವಾಗ್ದಾನ ನೀಡುವುದೂ ಉಂಟು.ಗ್ರಾಹಕರು ವಾರಂಟಿ ಕಾರ್ಡ್‌ನಲ್ಲಿರುವ ನಿಬಂಧನೆಗಳ ಮೇಲೆ ಕಣ್ಣಾಡಿಸುವುದು ಯುಕ್ತ. ವಾರಂಟಿಗೆ ಹಣದ ಮೌಲ್ಯ ಇರುವುದರಿಂದ ಇಡೀ ಉಪಕರಣಕ್ಕೆ ವಾರಂಟಿ ನೀಡುವ ರುಬ್ಬು ಯಂತ್ರವನ್ನು ಕೊಳ್ಳುವುದು ಸೂಕ್ತ. ಗ್ರೈಂಡರ್‌ನ್ನು ಮನೆಗೆ ತೆಗೆದುಕೊಂಡು ಹೋಗುವ ಮುನ್ನ ಅದರ ಮೇಲೆ ವಿತರಕರ ಸಹಿ, ಮುದ್ರೆ ಹಾಗೂ ದಿನಾಂಕ ನಮೂದಾಗಿದೆಯೇ ಖಾತ್ರಿ ಮಾಡಿಕೊಳ್ಳಬೇಕು. ಇದು ನಂತರದ ಕೆಲವು ವರ್ಷಗಳ ಕಾಲ ಗ್ರಾಹಕರ ತಲೆ ಬಿಸಿಯನ್ನು ಕಡಿಮೆ ಮಾಡುತ್ತದೆ.ಇವೆಲ್ಲದರ ಜತೆಗೆ ಗ್ರೈಂಡರ್ ಕೊಳ್ಳುವ ಮುನ್ನ ನಿಮ್ಮ ನೆರೆಹೊರೆಯವರು, ಬಂಧು ಬಾಂಧವರ ಹಾಗೂ ಗೆಳೆಯರ ಅಭಿಪ್ರಾಯವನ್ನು ಸಂಗ್ರಹಿಸುವುದು ಒಳ್ಳೆಯದು.

(ನಾಳೆ ಮುಂದುವರಿಯುವುದು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.