ರಿಯಾಯ್ತಿ

7

ರಿಯಾಯ್ತಿ

Published:
Updated:

ಲ್ಯಾಂಡ್‌ಮಾರ್ಕ್

ಟಾಟಾ ಸಮೂಹದ ಲ್ಯಾಂಡ್‌ಮಾರ್ಕ್ ಮಳಿಗೆಯಲ್ಲಿ ಅ. 30ರ ವರೆಗೆ ಎಲ್ಲ ಬಗೆಯ ಪುಸ್ತಕಗಳ ಮೇಲೆ ಶೇ 70ರ ವರೆಗೂ ರಿಯಾಯ್ತಿ.49 ರೂಪಾಯಿಯಿಂದಲೇ ಪುಸ್ತಕಗಳ ಬೆಲೆ ಆರಂಭ. ಆಮದು ಅಪರೂಪದ ಕಾದಂಬರಿ, ಕೃತಿಗಳ ಬೆಲೆ 299 ರೂಪಾಯಿಯಿಂದ ಆರಂಭ, ಇದಲ್ಲದೆ ಪಿಸಿ ಕನ್ಸೋಲ್, ಪಿಸಿ ಗೇಮ್‌ಗಳ ಮೇಲೂ ಶೇ 50ರ ವರೆಗೆ ರಿಯಾಯ್ತಿಯಿದೆ.ಜಾಕ್ ಅಂಡ್ ಜಾನ್ಸ್

ಹಬ್ಬದ ಅಂಗವಾಗಿ ಜಾಕ್ ಅಂಡ್ ಜಾನ್ಸ್ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ.ರೂ.5000ಕ್ಕೆ ಮೇಲ್ಪಟ್ಟು ಖರೀದಿ ಮಾಡಿದರೆ ರೂ.750 ಮೌಲ್ಯದ ಗಿಫ್ಟ್ ವೋಚರ್ ಉಚಿತ. ಅಲ್ಲದೆ ಲಕ್ಕಿ ಡ್ರಾ ಮೂಲಕ ಆಯ್ಕೆಯಾದವರಿಗೆ ಥೈಲ್ಯಾಂಡ್ ಪ್ರವಾಸದ ಬಹುಮಾನ. ಅಲ್ಲಿನ ಸುಂದರ ಕಡಲ ಕಿನಾರೆಯ ಐಷಾರಾಮಿ ಹೋಟೆಲ್‌ನಲ್ಲಿ 3 ರಾತ್ರಿ 4 ಹಗಲು ಕಾಲ ಕಳೆಯಬಹುದು.ಇಂದಿರಾನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಮಳಿಗೆಗಳಲ್ಲಿ ಈ ಕೊಡುಗೆ ಅ.30 ರವರೆಗೆ ಮಾತ್ರ ಲಭ್ಯ.ಸ್ಕೈಬ್ಯಾಗ್ಸ್

ಆಕರ್ಷಕ ಟ್ರಾವೆಲ್ ಬ್ಯಾಗ್‌ಗಳಿಗೆ ಹೆಸರಾದ ಸ್ಕೈ ಬ್ಯಾಗ್ಸ್ `ಸ್ಕ್ರಾಚ್ ಕರೋ ಸ್ಟೈಲ್ ಬದ್ಲೋ~ ಎಂಬ ವಿನೂತನ ಕೊಡುಗೆ ಪ್ರಕಟಿಸಿದೆ. ಜತೆಗೆ ಹುಂಡೈ ಐ10 ಕಾರು ಹಾಗೂ ಎಲ್‌ಸಿಡಿ ಟಿವಿ, ಮೊಬೈಲ್, ಪಾರ್ಕರ್ ಪೆನ್ ಮತ್ತಿತರ ಆಕರ್ಷಕ ಬಹುಮಾನಗಳನ್ನು  ಗೆಲ್ಲುವ ಅವಕಾಶ ಕಲ್ಪಿಸಿದೆ. ಈ ಸಂದರ್ಭದಲ್ಲಿ ಬ್ಯಾಗ್‌ಗಳ ಮೇಲೆ ಶೇ 40 ರಿಯಾಯ್ತಿ ಕೂಡ ನೀಡಲಿದೆ. ವಿಜೇತರಿಗೆ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರೇ ಬಹುಮಾನ ನೀಡಲಿದ್ದಾರೆ.ರಿಲಯನ್ಸ್ ವೋಚರ್

ಪುಸ್ತಕ, ಸೀಡಿ ಹಾಗೂ ಸ್ಟೆಷನರಿ ವಸ್ತುಗಳನ್ನು ಮಾರಾಟ ಮಾಡುವ ರಿಲಯನ್ಸ್ ಟೈಂ ಔಟ್ ವಿಶೇಷ ಕೊಡುಗೆ ಪ್ರಕಟಿಸಿದೆ.ಗ್ರಾಹಕರು ರೂ.1000 ಮೌಲ್ಯದ ಖರೀದಿಯೊಂದಿಗೆ ರೂ.1 ಸಾವಿರದ ವರೆಗೆ ಗಿಫ್ಟ್ ವೋಚರ್ ಗೆಲ್ಲಬಹುದು. ಜತೆಗೆ ಕ್ಯಾಮಿಲಾ ಪರ್‌ಪ್ಯೂಮ್ ಹಾಗೂ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು. ಈ ಕೊಡುಗೆ ಅ. 30 ಮಾತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry