ರಿಲಯನ್ಸ್ ಅನಿಲ ನಿಕ್ಷೇಪಗಳ ಶೇ 30ರಷ್ಟು ಪಾಲು ಬಿಪಿಗೆ

7

ರಿಲಯನ್ಸ್ ಅನಿಲ ನಿಕ್ಷೇಪಗಳ ಶೇ 30ರಷ್ಟು ಪಾಲು ಬಿಪಿಗೆ

Published:
Updated:
ರಿಲಯನ್ಸ್ ಅನಿಲ ನಿಕ್ಷೇಪಗಳ ಶೇ 30ರಷ್ಟು ಪಾಲು ಬಿಪಿಗೆ

ಲಂಡನ್ (ಪಿಟಿಐ): ಯೂರೋಪಿನ ಎರಡನೇ ಅತಿದೊಡ್ಡದಾದ ಇಂಗ್ಲೆಂಡ್ ಮೂಲದ ದೈತ್ಯ ತೈಲ ಸಂಸ್ಥೆಯಾಗಿರುವ  ಬಿಪಿ, ರಿಲಯನ್ ಇಂಡಸ್ಟ್ರೀಸ್‌ನ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಲ್ಲಿ ಶೇ 30ರಷ್ಟು ಪಾಲು ಹೊಂದಲು ನಿರ್ಧರಿಸಿದೆ.ರಿಲಯನ್ಸ್ ವಶದಲ್ಲಿ ಇರುವ 29 ನಿಕ್ಷೇಪಗಳ ಪೈಕಿ 23ರಲ್ಲಿ ಶೇ 30ರಷ್ಟು ಪಾಲು ಹೊಂದಲು ಬಿಪಿ ಸಂಸ್ಥೆಯು 7.2 ಶತಕೋಟಿ ಡಾಲರ್‌ಗಳನ್ನು   (ಅಂದಾಜು ರೂ 32,200 ಕೋಟಿ) ಪಾವತಿಸಲಿದೆ. ಶೇ 30ರಷ್ಟು ಪಾಲು ಪಡೆಯುವುದರ ಜೊತೆಗೆ ಬಿಪಿ ಸಂಸ್ಥೆಯು, ರಿಲಯನ್ಸ್ ಸಹಯೋಗದಲ್ಲಿ ಶೇ 50:50 ಪಾಲುದಾರಿಕೆಯಲ್ಲಿ ಹೊಸ ಜಂಟಿ ಉದ್ದಿಮೆ ಸ್ಥಾಪಿಸಲಿದೆ. ನೈಸರ್ಗಿಕ ಅನಿಲದ ಮಾರಾಟ, ಭಾರತಕ್ಕೆ ದ್ರವರೂಪದ  ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಮದು ವಹಿವಾಟನ್ನು ಈ ಜಂಟಿ ಉದ್ದಿಮೆಯು ನಿರ್ವಹಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಪಾಲು ಬಂಡವಾಳ ಮತ್ತು ಭವಿಷ್ಯದ ಜಂಟಿ ಬಂಡವಾಳ ಹೂಡಿಕೆಯ ಒಟ್ಟು ಮೊತ್ತವು 20 ಶತಕೋಟಿ ಡಾಲರ್‌ಗಳಷ್ಟು ( ್ಙ 92,000 ಕೋಟಿ) ಆಗಿರಲಿದೆ.‘ದೇಶದಲ್ಲಿನ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಅತಿ ದೊಡ್ಡ ಮೊತ್ತ ಇದಾಗಿದೆ. ಈ ಒಪ್ಪಂದವನ್ನು ಕೇಂದ್ರ ಸರ್ಕಾರವು ಇನ್ನೂ ಅನುಮೋದಿಸಬೇಕಾಗಿದೆ. ಒಪ್ಪಂದವು  ಮುಂದಿನ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದೆ’ ಎಂದು ರಿಲಯನ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಳ ಸಮುದ್ರದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲಗಳನ್ನು (ಹೈಡ್ರೊಕಾರ್ಬನ್) ಸಂಶೋಧಿಸುವ ಅತ್ಯುತ್ತಮ ಸಂಸ್ಥೆ ಜೊತೆಗಿನ ಸಹಯೋಗವು ಕೃಷ್ಣಾ ಗೋದಾವರಿ-ಡಿ6 ಅನಿಲ ನಿಕ್ಷೇಪ ತಾಣಗಳಲ್ಲಿ ಉತ್ಪಾದನೆ ಹೆಚ್ಚಿಸಲು ನೆರವಾಗಲಿದೆ ಎಂದೂ ಅಭಿಪ್ರಾಯಪಟ್ಟರು.ಭಾರತದಲ್ಲಿ ಇಂಧನ ಬಳಕೆಯು ಶೇ 4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗಲಿದ್ದರೆ, ನೈಸರ್ಗಿಕ ಅನಿಲದ ಬೇಡಿಕ ಶೇ 5ರಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ  ಈ ಪಾಲುದಾರಿಕೆಯು ಉಭಯ ಸಂಸ್ಥೆಗಳಿಗೆ ಲಾಭದಾಯಕವಾಗಿರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry