ರಿಸರ್ವ್ ಬ್ಯಾಂಕ್ ಒಪ್ಪಿಗೆ

7
ಎಟಿಎಂ ಬಳಕೆಗೆ ಶುಲ್ಕ

ರಿಸರ್ವ್ ಬ್ಯಾಂಕ್ ಒಪ್ಪಿಗೆ

Published:
Updated:

ಮುಂಬೈ(ಪಿಟಿಐ): ಬ್ಯಾಂಕ್‌ಗಳು ‘ಎಟಿಎಂ’ ಸೇವಾ ಶುಲ್ಕವನ್ನು ನ್ಯಾಯಸಮ್ಮತ ಪ್ರಮಾಣದಲ್ಲಿ ನಿಗದಿಪಡಿಸಲು ಸ್ವತಂತ್ರವಾಗಿವೆ. ಈ ಬಗ್ಗೆ ‘ಭಾರತೀಯ ರಿಸರ್ವ್ ಬ್ಯಾಂಕ್‌’ನಿಂದ  (ಆರ್‌ಬಿಐ) ಯಾವುದೇ  ಆಕ್ಷೇಪಣೆ ಇಲ್ಲ’ ಎಂದು ‘ಆರ್‌ಬಿಐ’ ಡೆಪ್ಯುಟಿ ಗವರ್ನರ್‌ ಕೆ.ಸಿ.ಚಕ್ರವರ್ತಿ ಹೇಳಿದ್ದಾರೆ.ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ, ‘ಎಟಿಎಂ’ ಸೇವಾ ಶುಲ್ಕ ಹೆಚ್ಚಿಸುವ ಸಂಬಂಧ ಈವರೆಗೂ ಯಾವುದೇ ಬ್ಯಾಂಕ್‌ನಿಂದ ಮನವಿ ಬಂದಿಲ್ಲ. ಒಂದು ವೇಳೆ ಬ್ಯಾಂಕ್‌ಗಳು ನಷ್ಟ ಅನುಭವಿಸುತ್ತಿದ್ದರೆ, ವರಮಾನ ಗಳಿಕೆ ಕಡಿಮೆ ಆಗಿದ್ದರೆ ಶುಲ್ಕ ಹೆಚ್ಚಳದ ಹೊರತಾಗಿ ಬೇರಾವುದೇ ಆಯ್ಕೆ ಇಲ್ಲ.ಆದರೆ, ಶುಲ್ಕ ಹೆಚ್ಚಳ ಪ್ರಮಾಣ ಮಾರುಕಟ್ಟೆಗೆ ಅನುಗುಣವಾಗಿ ಸ್ಪರ್ಧಾತ್ಮಕವಾಗಿಯೇ ಇರಬೇಕು’ ಎಂದು ’ ಎಂದು ಸ್ಪಷ್ಟಪಡಿಸಿದರು

ಬ್ಯಾಂಕ್‌ಗಳ ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಸದೃಢಗೊಳಿಸುವ ಸಲು­ವಾಗಿ, ಗ್ರಾಹಕರ ಎಟಿಎಂ ಸೇವೆ ಬಳಕೆ ಶುಲ್ಕವನ್ನು ಹೆಚ್ಚಿಸಬೇಕಿದೆ ಎಂಬ ಅಭಿಪ್ರಾಯ ಬ್ಯಾಂಕಿಂಗ್‌ ವಲಯದಿಂದ ಕೇಳಿಬರುತ್ತಿರುವ ಬೆನ್ನಲ್ಲೇ ‘ಆರ್‌ಬಿಐ’ ಪ್ರತಿ­ಕ್ರಿಯೆ ಹೊರಬಿದ್ದಿದೆ.ಸದ್ಯ ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ‘ಎಟಿಎಂ’ನ ಸೌಲಭ್ಯವನ್ನು ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಪಡೆದುಕೊಳ್ಳ­ಬಹುದಾಗಿದೆ. ಆದರೆ, ಇತರೆ ಬ್ಯಾಂಕ್‌ಗಳ ‘ಎಟಿಎಂ’ ಬಳಕೆಯನ್ನು ತಿಂಗಳಿಗೆ 5 ಬಾರಿಗೆ ಮಿತಿಗೊಳಿಸಲಾಗಿದೆ. ನಂತರದ ಪ್ರತಿ ವ್ಯವಹಾರಕ್ಕೆ ತೆರಿಗೆ ಸೇರಿ ರೂ 15­ರಂತೆ ಶುಲ್ಕವನ್ನು ಖಾತೆದಾರರ ಬ್ಯಾಂಕ್‌ ಇತರೆ ಬ್ಯಾಂಕ್‌ಗೆ ಪಾವತಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry