ರೀಲ್ ಅಮ್ಮಂದಿರ ರಿಯಲ್ ಲೋಕ

7

ರೀಲ್ ಅಮ್ಮಂದಿರ ರಿಯಲ್ ಲೋಕ

Published:
Updated:
ರೀಲ್ ಅಮ್ಮಂದಿರ ರಿಯಲ್ ಲೋಕ ಅಮ್ಮ ಅಂದರೆ ನಂಗಿಷ್ಟನನಗೆ 29 ವರ್ಷದ ಮಗನಿದ್ದಾನೆ. ಆದರೆ ಯಾವತ್ತೂ ಅಮ್ಮನ ಪಾತ್ರ ಬೇಡವೆಂದೆನಿಸಲಿಲ್ಲ. ಸಿಕ್ಕಿದ ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿದೆ. `ಮುಕ್ತ ಮುಕ್ತ~ದಲ್ಲಿ ಪೆದ್ದು ಅಮ್ಮನ ಪಾತ್ರ ಅದು.ವಾಸ್ತವದಲ್ಲಿಯೂ ಅಮ್ಮನೆಂದರೆ ಪೆದ್ದುಪೆದ್ದು ಎಂಬಂಥದ್ದೇ ಭಾವ ಮಕ್ಕಳದ್ದು. ಆದರೆ  ಅಮ್ಮನ ಪಾತ್ರ ಮಾಡುವಾಗ ಕೇವಲ ತಾಯ್ತನದ ಅನುಭವವಾಗುತ್ತದೆ. ಆ ಖುಷಿಯಲ್ಲಿಯೇ ಮನಸ್ಸು ಅರಳುತ್ತದೆ. `ಮೈಲಾರಿ~ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಗೆ ತಾಯಿಯಾದೆ.ಶಿವರಾಜ್ ಕುಮಾರ್ ನನಗಿಂತ ಸುಮಾರು ಐದಾರು ವರ್ಷ  ಚಿಕ್ಕವರಷ್ಟೆ. ಆದರೂ ಅವರು ನನ್ನ ಮಗನೇ ಎಂಬ ಭಾವವೊಂದು ಮನಸ್ಸಿನಲ್ಲಿ ಮೂಡಿತ್ತು.ನನ್ನೆಲ್ಲ ಯಶಸ್ಸಿಗೆ ಕಾರಣ ನನ್ನಮ್ಮ. ನಾವು ಆರು ಜನ ಮಕ್ಕಳು .ಆದರೆ ನನ್ನಮ್ಮ ನನ್ನನ್ನೇ ಜಾಸ್ತಿ ಮುದ್ದು ಮಾಡುತ್ತಾಳೆ ಅನಿಸುತಿತ್ತು. ಒಂದು ರೀತಿ ಬುದ್ಧಿವಂತಿಕೆಯಲ್ಲಿ ಅಮ್ಮ ಮಕ್ಕಳನ್ನು ನಿಭಾಯಿಸುತ್ತಿದ್ದಳು. ಇತ್ತೀಚೆಗೆ ಹೆಣ್ಣುಮಕ್ಕಳಲ್ಲಿ ಮಾತೃತ್ವದ ಬಗ್ಗೆ ಪ್ರೀತಿಯಾಗಲಿ, ಆದರವಾಗಲಿ ಕಾಣುತ್ತಿಲ್ಲ. ಅತ್ತೆ ಮಾವ ಇದ್ದರೆ ಕಿರಿಕಿರಿ ಎಂಬ ಮನಃಸ್ಥಿತಿ ಇದೆ.ತಾನು ಸ್ವಾವಲಂಬಿ ಎಂಬ ಮನೋಭಾವವೂ ಕಾರಣವಾಗಿರಬಹುದು. ಹೋಲಿಕೆ ಮಾಡಿದರೆ ಗಂಡುಮಕ್ಕಳೇ ಪಾಪದವರು. ಅಮ್ಮನ ಪಾತ್ರ ಎಲ್ಲರಿಗೂ ನಿಭಾಯಿಸೋದಕ್ಕೆ ಆಗಲ್ಲ. ಮಮತೆ, ಕರುಣೆಯ ಸಾಗರ ಅವಳ ಮನಸ್ಸು. ಅಂತಹ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು. ನನಗೆ ವೈಶಾಲಿ ಕಾಸರವಳ್ಳಿ ಅವರು ರೋಲ್ ಮಾಡೆಲ್.ಖುಷಿ ನೀಡುವ `ಅಮ್ಮ~ಮಾಯಾಮೃಗ ಸೀರಿಯಲ್‌ನಲ್ಲಿ ಅಭಿನಯಿಸುವಾಗ, ಹೆರಿಗೆಯಾಗಿ ಕೇವಲ 3 ದಿನಗಳಾಗಿತ್ತು. ಮೂರು ದಿನದ ಎಳೆ ಮಗುವಿನೊಂದಿಗೆ ಕ್ಯಾಮೆರಾ ಎದುರಿಸಿದ್ದು ಎಂದೂ ಮರೆಯಲಾಗದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನನ್ನ ಮಗು ಸಹಜವಾಗಿಯೇ ಬಾಲ ಕಲಾವಿದ!  ಈಗ ಹನ್ನೆರಡು ವರ್ಷದ ಮಗ, ನಾಲ್ಕು ವರ್ಷದ ಮಗಳಿದ್ದಾಳೆ ಈಗ.`ಲೈಫು ಇಷ್ಟೇನೇ~ ಸಿನಿಮಾದಲ್ಲಿ ದಿಗಂತ್‌ಗೆ ಅಮ್ಮನಾಗಿ ಅಭಿನಯಿಸಿದೆ. `ಸಂಬಂಧ~, `ಗೃಹಿಣಿ~ ಧಾರಾವಾಹಿಗಳಲ್ಲಿ ತಾಯಿ ಪಾತ್ರವೇ ಸಿಕ್ಕಿದೆ. ಮೊದಲು ಅಮ್ಮನ ಪಾತ್ರ ಕೊಡ್ತಾರೆ ಅಂತ ಬೇಜಾರಾಗುತ್ತಿತ್ತು. ಆಮೇಲೆ ಆ ಪಾತ್ರದ ಬೆಲೆ, ಅದರಲ್ಲಿ ಸಿಗುವ ಆನಂದ ನನ್ನಲ್ಲಿ ಉತ್ಸಾಹ ತುಂಬಿತು.ತುಂಬಾ ದೊಡ್ಡ ಮಕ್ಕಳಿಗೆ ಅಮ್ಮನಾಗುವ ಸನ್ನಿವೇಶ ಬಂದಾಗ ನಾನು ಪಾತ್ರವನ್ನು ಖುಷಿಯಿಂದ ಅನುಭವಿಸುತ್ತೇನೆ. ನನ್ನ ಮಕ್ಕಳು ವಯಸ್ಸಿಗೆ ಬಂದಾಗ ಅವರಲ್ಲೂ ಇದೇ ಭಾವನೆಗಳು ಮೂಡುತ್ತದೆ. ಆಗ ನಾನು ಅವರೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಈಗಲೇ ಕಲಿಯುತ್ತಿದ್ದೇನೆ. ಅಮ್ಮನಿಂದ ಕಲಿತಷ್ಟೇ ಅಮ್ಮನ ಪಾತ್ರಗಳಿಂದಲೂ ಕಲಿಯುತ್ತೇವೆ..!ಅಮ್ಮನ ಗರ್ಭ ದೇವಲೋಕ...ತಾಯಿ ಗರ್ಭವೇ ಸ್ವರ್ಗ. ಅಲ್ಲಿಂದ ಹೊರಗೆ ಬಂದರೆ ನರಕ ಎಂದರೆ ತಪ್ಪಾಗಲಾರದು. ಆದರೆ ಎಷ್ಟು ದಿನ ಅಮ್ಮನ ಗರ್ಭದಲ್ಲಿ ಬೆಚ್ಚಗೆ ಮುದುಡಿಕೊಳ್ಳಲು ಸಾಧ್ಯ? ಹೊರಪ್ರಪಂಚಕ್ಕೆ ಬರಲೇಬೇಕಲ್ಲ. ನಾನು ತಾಯಿಯಾದಾಗ ತುಂಬಾನೇ ಖುಷಿ ಪಟ್ಟಿದ್ದೆ. ಆ ಸುಖವನ್ನು ಅನುಭವಿಸಿದ್ದೆ. ಪುಟ್ಟಣ್ಣ ಕಣಗಲ್ ಅವರ `ಋಣಮುಕ್ತ~ ಸಿನಿಮಾದಲ್ಲಿ ನಾನು ಮೊದಲ ಸಲ ತಾಯಿ ಪಾತ್ರ ಮಾಡಿದ್ದು; ಅದೂ ನನ್ನ 19ನೇ ವಯಸ್ಸಿನಲ್ಲಿ. 20 ವರ್ಷದ ಹುಡುಗನಿಗೆ ಆಗ ನಾನು ಅಮ್ಮನಾಗಿ ನಟಿಸಿದ್ದು.ಹೆಣ್ಣಿನಲ್ಲಿ ಸಹಜವಾಗಿಯೇ ತಾಯ್ತನವಿರುತ್ತದೆ. ಆದರೆ ಬಣ್ಣದ ಬದುಕಿಗಿಂತಲೂ ನಿಜ ಜೀವನದಲ್ಲಿ ತಾಯಿಯಾಗುವುದಿದೆಯಲ್ಲ, ಅದು ನೀಡುವ ಅನುಭೂತಿಯೇ ಸುಂದರ. ನಾನು ನನ್ನ ಮಕ್ಕಳಿಗಾಗಿ ಹನ್ನೊಂದು ವರ್ಷ ಬಣ್ಣದ ಬದುಕಿನಿಂದ ದೂರ ಉಳಿದೆ; ನನ್ನ ಮಕ್ಕಳ ತೊದಲು ಮಾತು, ಅವರ ತುಂಟಾಟಗಳನ್ನು ನೋಡಿ ಆನಂದಿಸಬೇಕು ಎಂಬ ಹಂಬಲದಿಂದ. `ಅಂಬಿಕಾ~, `ಸಂಕ್ರಾಂತಿ~ ಸೀರಿಯಲ್‌ನಲ್ಲಿ ತಾಯಿ ಪಾತ್ರ ಮಾಡಿದ್ದೇನೆ.ಪ್ರತಿಯೊಂದು ಪಾತ್ರ ಮಾಡುವಾಗಲೂ ನನ್ನಲ್ಲಿಯ ತಾಯ್ತನ ಜಾಗೃತವಾಗುತ್ತಿತ್ತು. ಆಗೆಲ್ಲಾ ಮಕ್ಕಳ ನೆನಪು ಕಾಡುತ್ತಿತ್ತು. ಬೇಗ ಶೂಟ್ ಮುಗಿಸಿ ಅವರನ್ನು ನೋಡಬೇಕು ಎಂದು ಮನಸ್ಸು ಚಡಪಡಿಸುತ್ತಿತ್ತು. ಅಮ್ಮನ ನೆನಪು ಮಾಡಿಕೊಳ್ಳುವುದು ಎಂಬ ಮಾತೇ ಬರೋಲ್ಲ. ಜೀವನದಲ್ಲಿ ಅವಳನ್ನು ಮರೆಯುವ ಪ್ರಶ್ನೆಯೇ ಇಲ್ಲ.

 

ನಾವು ಮಗುವಿದ್ದಾಗ ಮಡಿಲಲ್ಲಿ ಜಾಗಕೊಟ್ಟವಳಿಗೆ ಅವಳ ವೃದ್ಧಾಪ್ಯದಲ್ಲಿ ನಾವು ತಾಯಿಯಾಗಬೇಕು. ಅದೇ ನಾವು ಅಮ್ಮನಿಗೆ ಕೊಡುವ ಉಡುಗೊರೆ. ಅವಳ ಋಣವನ್ನಂತೂ ತೀರಿಸಲು ಸಾಧ್ಯವಿಲ್ಲ. ಹೀಗಾದರೂ ಅವಳನ್ನು ನೊಡಿಕೊಳ್ಳಬೇಕು. ಮದರ್ ಇಂಡಿಯಾದಲ್ಲಿ ನರ್ಗಿಸ್ ಮಾಡಿದ ಅಮ್ಮನ ಪಾತ್ರ ನನ್ನನ್ನು ತುಂಬಾನೇ ಕಾಡಿದೆ. ಆ ಸಿನಿಮಾ ಎಷ್ಟು ಬಾರಿ ನೋಡಿದರೂ ನನಗೆ ಬೇಸರವಾಗೋಲ್ಲ.

ಬೆಳ್ಳಿತೆರೆ, ಕಿರುತೆರೆಗಳಲ್ಲಿ ಆವರಿಸಿಕೊಂಡಿರುವ ಅಮ್ಮಂದಿರು ಹಲವರು. ತಮ್ಮ ಓರಗೆಯ ನಟರಿಗೇ ಅಮ್ಮನಾಗಿ ನಟಿಸುವ ಅನಿವಾರ್ಯತೆ ಎದುರಿಸಿದವರೂ ಇದ್ದಾರೆ. ನಿಜ ಬದುಕಿನಲ್ಲೂ ಅಮ್ಮನಾಗಿ, ಪಾತ್ರವಾಗಿಯೂ ಅಮ್ಮನಾಗಿ ಅವರು ಬೇರಯದ್ದೇ ಸವಾಲಿಗೆ ಒಡ್ಡಿಕೊಂಡಿರುತ್ತಾರೆ. ಅಂಥ ಕೆಲವು ಅಮ್ಮಂದಿರು `ಮೆಟ್ರೊ~ ಜೊತೆ ಮಾತನಾಡಿದ್ದಾರೆ. ಇದು `ತಾಯಂದಿರ ದಿನ~ದ ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry