ರುಕ್ಮಾಪುರ: ಎರಡು ವೀರಗಲ್ಲು ಪತ್ತೆ

7

ರುಕ್ಮಾಪುರ: ಎರಡು ವೀರಗಲ್ಲು ಪತ್ತೆ

Published:
Updated:

ಗುಲ್ಬರ್ಗ: ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ರಸ್ತೆಯ ಪಕ್ಕದಲ್ಲಿ ಎರಡು ವೀರಗಲ್ಲುಗಳು ದೊರಕಿದ್ದು, ಇತಿಹಾಸ ಸಂಶೋಧಕರಿಗೆ ಕೂತೂಹಲ ಮೂಡಿಸಿದೆ.

ಜೇವರ್ಗಿಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಡಾ.ಎಲ್. ಗೋವಿಂದರಾಜು, ಸಗರ ಕಾಲೇಜಿನ ಉಪನ್ಯಾಸಕ ಜಿ.ಎಸ್.ದೇಸಾಯಿ ಅವರು ಈ ವೀರಗಲ್ಲುಗಳನ್ನು ಪತ್ತೆ ಹಚ್ಚಿದ್ದಾರೆ.ಕಲ್ಲುಗಳಲ್ಲಿ ಮೂಡಿರುವ ಕೆತ್ತನೆಯನ್ನು ಗಮಿಸಿದರೆ ಸುರಪುರ ಸಂಸ್ಥಾನಕ್ಕೆ ಸೇರಿದ ಸೈನಿಕರ ಚಹರೆಯನ್ನು ಹೊಂದಿವೆ. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಪ್ರವರ್ಧಮಾನಕ್ಕೆ ಬಂದಿದ್ದ ಸುರಪುರ ದೊರೆಗಳು, 1857ರಲ್ಲಿ ಬ್ರಿಟಿಷ್‌ರ ಜೊತೆ ಘನಘೋರವಾದ ಕಾಳಗ ‘ಬಗಡಿ’ ಎಂಬಲ್ಲಿ ನಡೆದಿತ್ತು. ಆ ಬಗಡಿ ಪ್ರದೇಶ ಇಲ್ಲಿಗೆ ಸಮೀಪದ ಬಯಲು ಪ್ರದೇಶವಾಗಿದ್ದರಿಂದ ಈ ಕಲ್ಲುಗಳು ಮಹತ್ವವನ್ನು ಪಡೆದುಕೊಂಡಿವೆ.ಒಂದನೇ ಚಿತ್ರ: ಇದರಲ್ಲಿ ಮೂವರು ಯೋಧರಿದ್ದು, ಕೊರಳಿಗೆ ತಾಯಿತ, ಗಿರೀಜಾ ಮೀಸೆ, ನಡಕ್ಕೆ ಕತ್ತಿಯನ್ನು ಕಟ್ಟಿಕೊಂಡಿದ್ದಾರೆ. ಎಡ ಬಲ ಯೋಧರು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಡಾಲು ಹಿಡಿದಿದ್ದಾರೆ. ಮಧ್ಯೆದಲ್ಲಿ ಇರುವ ಯೋಧ ಬಂದೂಕು ಹಿಡಿದಿದ್ದಾನೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಚಿತ್ರವಿದೆ. ಇದು ‘ಶಾಶ್ವತ’ವಾದ ಸಂದೇಶವನ್ನು ಬಿಂಬಿಸುತ್ತದೆ.ಎರಡನೇ ಚಿತ್ರ: ಈ ವೀರಗಲ್ಲಿನಲ್ಲಿ ಇಬ್ಬರು ಯೋಧರ ಚಿತ್ರವಿದೆ. ಇದರಲ್ಲಿ ಒಬ್ಬ ಯೋಧ ಕೈಯಲ್ಲಿ ಖಡ್ಗ, ಡಾಲು ಹಿಡಿದಿದ್ದರೆ, ಇನ್ನೊಬ್ಬ ಯೋಧ ಕೈಯಲ್ಲಿ ಭರ್ಚಿಯನ್ನು ಹಿಡಿದಿದ್ದಾನೆ. ನೋಡಲು ಆಕರ್ಷಕವಾಗಿರುವ ಈ ವೀರಗಲ್ಲುಗಳು ನುರಿತ ತಜ್ಞರ, ಶಿಲ್ಪಿಗಳ, ಸಂಶೋಧಕರ ಗಮನಕ್ಕೆ ಬಂದರೆ ಹೆಚ್ಚಿನ ಮಾಹಿತಿ ಲಭಿಸಬಹುದು ಎಂದು ಈ ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry