ಸೋಮವಾರ, ಮೇ 17, 2021
31 °C

ರುಚಿ ಸೋಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ಗ್ರಾಹಕರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಡೆದ ಡೆಲಾಯಿಟ್  ಅಧ್ಯಯನ  ವರದಿಯಲ್ಲಿ, ರುಚಿ ಸೋಯಾ ಇಂಡಸ್ಟ್ರೀಸ್ (ರುಚಿ ಸೋಯಾ), ವಿಶ್ವದ 250 ಉದ್ಯಮಗಳಲ್ಲಿ ಒಂದಾಗಿದೆ.ಜಾಗತಿಕ 250 ಉದ್ದಿಮೆ ಸಂಸ್ಥೆಗಳಲ್ಲಿ  ಸೇರ್ಪಡೆಯಾಗಿರುವ ದೇಶದ ಮೂರು  ಸಂಸ್ಥೆಗಳಲ್ಲಿ ರುಚಿ ಸೋಯಾ ಕೂಡ ಸೇರಿದೆ. ದೇಶದ ಅತಿ ದೊಡ್ಡ ಖಾದ್ಯ ತೈಲ ಮತ್ತು `ನ್ಯೂಟ್ರಿಲಾ~ ಹೆಸರಿನ ಸೋಯಾ ಉತ್ಪನ್ನಗಳ ಸಂಸ್ಥೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ 50 ಉದ್ದಿಮೆಗಳಲ್ಲಿ ಸ್ಥಾನ ಪಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ರುಚಿ ಸೋಯಾ, ದೇಶದಲ್ಲಿ ವಿಶ್ವಾಸಾರ್ಹ ಬ್ರಾಂಡ್‌ಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಶಾಹ್ರಾ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.