ಮಂಗಳವಾರ, ಏಪ್ರಿಲ್ 20, 2021
31 °C

ರುದ್ರರತ್ನ ರುದ್ರಾಕ್ಷಿ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರುದ್ರಾಕ್ಷಿ ಮಣಿಯನ್ನು ದೈವೀ ಸ್ವರೂಪವೆಂದು ಪೂಜಿಸುವ, ಕೊರಳಿಗೆ ಹಾಕಿಕೊಳ್ಳುವ ಮಂದಿ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಇವುಗಳನ್ನು ಧರಿಸುವುದರಿಂದ ಅನೇಕ ವ್ಯಾಧಿಗಳಿಂದಲೂ ಮುಕ್ತಿಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಹಲವರಲ್ಲಿದೆ.ರುದ್ರಾಕ್ಷಿ ಧರಿಸುವ ಮಂದಿಗೊಂದು ಸಿಹಿ ಸುದ್ದಿ. ಕೋಲ್ಕತ್ತಾದ `ರುದ್ರರತ್ನ~ ಸಂಸ್ಥೆ ಇದೇ ಮಂಗಳವಾರದವರೆಗೆ (ಜು.24) ರುದ್ರಾಕ್ಷಿ ಮಣಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ. ಇಲ್ಲಿ ಅಪರೂಪದ ನೇಪಾಳದ ಏಕಮುಖಿ ರುದ್ರಾಕ್ಷಿ, ದ್ವಿಮುಖಿ ರುದ್ರಾಕ್ಷಿ ಮಣಿಗಳು ಇವೆ. ರಾಶಿಗೆ ಸಂಬಂಧಿಸಿದ ಮಣಿಗಳು ಲಭ್ಯ.ರುದ್ರಾಕ್ಷಿ ಧರಿಸುವುದರಿಂದ ಅಧಿಕ ಒತ್ತಡ, ಉದರ ಸಮಸ್ಯೆ, ರಕ್ತದೊತ್ತಡ ಹಾಗೂ ಅಸ್ತಮಾ ಸೇರಿದಂತೆ ಇನ್ನಿತರೆ ವ್ಯಾಧಿಗಳು ಪರಿಹಾರವಾಗುತ್ತವೆ ಎಂಬುದು ಸಂಸ್ಥೆಯ ಅಭಿಪ್ರಾಯ.ಮಾರುಕಟ್ಟೆಯಲ್ಲಿ ನಕಲಿ ರುದ್ರಾಕ್ಷಿ ಮಾರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬ ಆರೋಪವಿದೆ.  ಅಸಲಿ ರುದ್ರಾಕ್ಷಿ ಕತ್ತರಿಸಿದರೆ ಒಳಭಾಗದಲ್ಲಿ ರಂಧ್ರವಿರುತ್ತವೆ. ಈ ಮೂಲಕ ಅದರ ಅಸಲಿತನ ಅರಿಯಬಹುದು. ಖರೀದಿಸುವವರು ಎಚ್ಚರ ವಹಿಸಬೇಕು.

ಸ್ಥಳ: ಇನ್‌ಫೆಂಟ್ರಿ ಹೋಟೆಲ್, ಇನ್‌ಫೆಂಟ್ರಿ ರಸ್ತೆ. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರುತ್ತದೆ. ಮಾಹಿತಿಗೆ: 97484 70045

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.