ರೂಪಾಯಿ ಅಪಮೌಲ್ಯ: ಬಿಕ್ಕಟ್ಟಿನಲ್ಲಿ ಸಣ್ಣ ಉದ್ಯಮ

6

ರೂಪಾಯಿ ಅಪಮೌಲ್ಯ: ಬಿಕ್ಕಟ್ಟಿನಲ್ಲಿ ಸಣ್ಣ ಉದ್ಯಮ

Published:
Updated:

ಬೆಂಗಳೂರು (ಐಎಎನ್‌ಎಸ್): ಗರಿಷ್ಠ ಮಟ್ಟದಲ್ಲಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಜತೆಗೆ ಇದೀಗ ರೂಪಾಯಿ ವಿನಿಮಯ ಮೌಲ್ಯ ಕುಸಿತ ರಾಜ್ಯದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಂಎಸ್‌ಎಂಇ) ಸಂಸ್ಥೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ವರಮಾನ ಕುಸಿತದ ಭೀತಿ ಎದುರಾಗಿದೆ ಎಂದು ಉದ್ಯಮ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.`ಶೇ 14.5ರಷ್ಟು `ವ್ಯಾಟ್'ನಿಂದಾಗಿ ರಾಜ್ಯದ `ಎಂಎಸ್‌ಎಂಇ' ವಲಯ ಈಗಾಗಲೇ ತತ್ತರಿಸಿದೆ. ಇದರ ಜತೆಗೆ ಡಾಲರ್ ಮತ್ತು ಪೌಂಡ್ ವಿರುದ್ಧ ರೂಪಾಯಿ ಅಪಮೌಲ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೆರಿಗೆ ದರ ಕಡಿಮೆ ಇರುವ ನೆರೆಯ ರಾಜ್ಯಗಳ ಜತೆ ಸ್ಪರ್ಧಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ' ಎನ್ನುತ್ತಾರೆ  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ದಕ್ಷಿಣ ವಲಯದ ಅಧ್ಯಕ್ಷ ಜೆ. ಕ್ರಾಸ್ತಾ.`ವ್ಯಾಟ್' ತಗ್ಗಿಸಲು ಆಗ್ರಹ

ರೂಪಾಯಿ ಅಪಮೌಲ್ಯದಿಂದ ಕಚ್ಚಾ ಸರಕುಗಳು ಮತ್ತು ಬಿಡಿಭಾಗಗಳ ಆಮದು ತುಟ್ಟಿಯಾಗಿದೆ. ಇದರಿಂದ ರಾಜ್ಯದ ಅನೇಕ `ಎಂಎಸ್‌ಎಂಇ' ಘಟಕಗಳಲ್ಲಿ ಉದ್ಯಮದ ಬೇಡಿಕೆ ಪೂರೈಸುವಷ್ಟು ಉತ್ಪಾದನೆ ನಡೆಯುತ್ತಿಲ್ಲ.  ಸರಕು ಸಾಗಾಣಿಕೆ ವೆಚ್ಚವೂ ತುಟ್ಟಿಯಾಗಿದೆ. ವಿದ್ಯುತ್ ದರವೂ ಏರಿಕೆ ಕಂಡಿದೆ. ಈ ಎಲ್ಲ ಅಂಶಗಳು ಕೈಗಾರಿಕೆ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎನ್ನುತ್ತಾರೆ ಅವರು.`ನೆರೆಯ ರಾಜ್ಯಗಳಲ್ಲಿ ಶೇ 5ಕ್ಕಿಂತಲೂ ಕಡಿಮೆ `ವ್ಯಾಟ್' ಇದೆ. ಇದರಿಂದ ಅಲ್ಲಿನ ತಯಾರಿಕಾ ವಲಯ ಉತ್ತಮ ಪ್ರಗತಿ ಕಾಣುತ್ತಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಜತೆ ಸ್ಪರ್ಧಿಸಲು ರಾಜ್ಯದಲ್ಲಿ ಶೇ 8ಕ್ಕೆ `ವ್ಯಾಟ್' ತಗ್ಗಿಸಬೇಕು ಎನ್ನುವುದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಆಗ್ರಹ.ದೇಶದ ಒಟ್ಟಾರೆ `ಜಿಡಿಪಿ'ಗೆ `ಎಂಎಸ್‌ಎಂಇ' ಕೊಡುಗೆ ಶೇ 8ರಷ್ಟಿದೆ. ತಯಾರಿಕಾ ವಲಯಕ್ಕೆ ಈ ವಲಯದ ಕೊಡುಗೆ ಶೇ 45ರಷ್ಟು ಮತ್ತು ರಫ್ತಿಗೆ ಶೇ 40ರಷ್ಟು ಇದೆ.  ದೇಶದಾದ್ಯಂತ 260ಲಕ್ಷ `ಎಂಎಸ್‌ಎಂಇ' ಘಟಕಗಳಿದ್ದು ಒಟ್ಟಾರೆ 600 ಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry