ರೂಪಾಯಿ ಗಾನ

7

ರೂಪಾಯಿ ಗಾನ

Published:
Updated:
ರೂಪಾಯಿ ಗಾನ

ವೇದಿಕೆ ಮೇಲೇರಿದ ನಾಯಕಿ ರಮ್ಯಾ ಬಾರ್ನಾ ಮೈಬಳುಕಿಸಿದರು. ಅವರಿಗೆ ಜೊತೆಯಾದದ್ದು ನಾಯಕ ಸಂದೀಪ್, ನಟಿ ನೀತು ಮತ್ತು ನಿರ್ದೇಶಕ ದಯಾಳ್ ಪದ್ಮನಾಭನ್. ಹಿನ್ನೆಲೆಯಲ್ಲಿ `ಒಂದು ರೂಪಾಯಲ್ಲಿ ಎರಡು ಪ್ರೀತಿ~ ಚಿತ್ರದ ಹಾಡುಗಳು ಕೇಳುತ್ತಿದ್ದವು.ಈ ಚಿತ್ರದ ಹಾಡುಗಳ ಪ್ರದರ್ಶನ ಮತ್ತು ಆಡಿಯೋ ಸೀಡಿ ಬಿಡುಗಡೆ ಸಮಾರಂಭ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ರೆವಲ್ಯೂಷನ್ ಸ್ಟುಡಿಯೋದಲ್ಲಿ ಏರ್ಪಾಟಾಗಿತ್ತು. ಮೊದಲಿಗೆ ಹಾಡುಗಳ ಪ್ರದರ್ಶನವಾಯಿತು. ನಂತರ ಹಾಡುಗಳನ್ನು ಗಾಯಕಿ ಚೈತ್ರಾ, ಅವಿನಾಶ್ ಛೆಬ್ಬಿ, ಚರಣ್ ರಾಜ್, ರಿಚಾ ಪಾಲ್ ಹಾಡಿದರು.

 

ಇದೇ ಸಂದರ್ಭದಲ್ಲಿ ಹೊಸ ಗಾಯಕ ಚರಣ್ ರಾಜ್ ಮತ್ತು ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಅಭಿಷೇಕ್ ಅವರನ್ನು ಚಿತ್ರತಂಡ ಪರಿಚಯಿಸಿತು. ಹಾಗೆಯೇ ಚಿತ್ರತಂಡ ವೇದಿಕೆ ಮೇಲೆ ನರ್ತಿಸಿ ಖುಷಿಪಟ್ಟಿತು. ಅದರ ನಡುವೆಯೇ ನಾಯಕ ವಿಜಯ ರಾಘವೇಂದ್ರ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಸಚಿವ ರಾಜು ಗೌಡ ಪಾಟೀಲ ಚಿತ್ರದ ಸೀಡಿಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ನಿರ್ದೇಶಕರು ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಇಂಗಿತ ವ್ಯಕ್ತಪಡಿಸಿದರು. `ಈ ಚಿತ್ರಕ್ಕೆ ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ಬ್ಯಾಂಡ್ ಶೈಲಿಯಲ್ಲಿ ಸಂಗೀತ ನೀಡಿದ್ದೇನೆ~ ಎಂದು ಹೇಳಿದ ರಿಕ್ಕಿ ಕೇಜ್ ಅವಕಾಶ ಕೊಟ್ಟವರಿಗೆ ಧನ್ಯವಾದ ಸಲ್ಲಿಸಿದರು.          

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry