ರೂಪಾಯಿ ಮೌಲ್ಯ: ಪ್ರಣವ್ ಕಳವಳ

7

ರೂಪಾಯಿ ಮೌಲ್ಯ: ಪ್ರಣವ್ ಕಳವಳ

Published:
Updated:

ಕೋಲ್ಕತ್ತ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿರುವುದು ಅತ್ಯಂತ ಕಳವಳಕಾರಿ ಸಂಗತಿ. ಆದರೆ ಕೇಂದ್ರ ಸರ್ಕಾರವೇನೂ ಕೈಕಟ್ಟಿ ಕುಳಿತಿಲ್ಲ. ಈ ಬೆಳವಣಿಗೆಗಳ ಮೇಲೆ ನಿಗಾ ವಹಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.`ಯೂರೋಪ್ ಒಕ್ಕೂಟದ ಬಿಕ್ಕಟ್ಟಿನಿಂದ ರೂಪಾಯಿ ವಿನಿಮಯ ಮೌಲ್ಯ ಕುಸಿದಿದೆ. ಸರ್ಕಾರ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಭಾರತ ಮಾತ್ರವಲ್ಲ ಬ್ರೆಜಿಲ್ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳಲ್ಲೂ `ಕರೆನ್ಸಿ~ ಬಿಕ್ಕಟ್ಟು ಇದೆ ಎಂದು ವಿವರಿಸಿದರು.ಶುಕ್ರವಾರ ಬೆಳಿಗ್ಗೆ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ್ಙ55ರ ಮಟ್ಟಕ್ಕೆ ಕುಸಿದಿತ್ತು. ನಂತರ ದಿನದಂತ್ಯಕ್ಕೆ ್ಙ54.91ಕ್ಕೆ ಚೇತರಿಸಿಕೊಂಡಿತ್ತು. ತೈಲ ಶುದ್ಧೀಕರಣ ಕಂಪೆನಿಗಳು ಸೇರಿದಂತೆ ಆಮದುದಾರರಿಂದ ಡಾಲರ್ ಬೇಡಿಕೆ ಹೆಚ್ಚಿದೆ. ರೂಪಾಯಿ ಅಪಮೌಲ್ಯಕ್ಕೆ ಇದು ಮುಖ್ಯ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry