ಶುಕ್ರವಾರ, ಮೇ 14, 2021
29 °C

ರೂ 1 ಯೋಜನೆಗೆ ಛತ್ತೀಸಗಡದ ಅಕ್ಕಿ

-ಕೃಷ್ಣಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಕಡಿಮೆ ದರದಲ್ಲಿ ವಿತರಿಸಲು ಅಗತ್ಯ ಇರುವ 25 ಸಾವಿರ ಟನ್ ಅಕ್ಕಿಯನ್ನು ಛತ್ತೀಸಗಡದಿಂದ ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ 1 ರೂಪಾಯಿಗೆ ಒಂದು ಕೆ.ಜಿ ಅಕ್ಕಿ ನೀಡುವ ಯೋಜನೆಗೆ ಜುಲೈ ತಿಂಗಳಿನಲ್ಲಿ ಚಾಲನೆ ನೀಡಲು ದಾರಿ ಸುಗಮವಾಗಿದೆ.ಜುಲೈ ತಿಂಗಳಿಗೆ ಅಗತ್ಯವಿರುವ ಅಕ್ಕಿಯನ್ನು ಮಾತ್ರ ಛತ್ತೀಸಗಡದಿಂದ ಖರೀದಿಸಲಾಗುತ್ತಿದೆ. ಆಗಸ್ಟ್ ತಿಂಗಳಿನಿಂದ ಪೂರೈಸಲು ಅಗತ್ಯವಿರುವ ಅಕ್ಕಿಯನ್ನು ಟೆಂಡರ್ ಮೂಲಕ ಖರೀದಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು. ಅಕ್ಕಿ ಖರೀದಿ ಸಂಬಂಧ ಛತ್ತೀಸಗಡ ಆಹಾರ ಸಚಿವ ಪುಣ್ಣೆಲಾಲ್ ಮೊಹಲೆ ಅವರೊಂದಿಗೆ ಶುಕ್ರವಾರ ಇಲ್ಲಿ ಚರ್ಚೆ ನಡೆಸಿದ ನಂತರ ಈ ವಿಷಯ ತಿಳಿಸಿದ ದಿನೇಶ್, 1 ಕೆ.ಜಿ. ಅಕ್ಕಿಯನ್ನುರೂ23.60 ದರದಲ್ಲಿ ಖರೀದಿಸಲಾಗುತ್ತದೆ. ಸಾಗಾಣಿಕೆ ವೆಚ್ಚ ಸೇರಿದರೆ ಕೆ.ಜಿಗೆ ರೂ27 ಆಗಬಹುದು ಎಂದರು.`ಕಡಿಮೆ ದರದಲ್ಲಿ ಅಕ್ಕಿ ನೀಡುತ್ತಾರೋ, ಇಲ್ಲವೋ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜುಲೈ 10ರಂದು ಬೆಂಗಳೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು' ಎಂದು ತಿಳಿಸಿದರು. ಕೇಂದ್ರ ಸರ್ಕಾರ ಪ್ರತಿ ತಿಂಗಳು 1.50 ಲಕ್ಷ ಟನ್ ಅಕ್ಕಿ ನೀಡುತ್ತಿದೆ. ಇದನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 1 ಲಕ್ಷ ಟನ್ ಅಕ್ಕಿ ಅಗತ್ಯವಿದೆ. ಹಿಂದಿನ ಬಾಕಿ 75 ಸಾವಿರ ಟನ್ ಅಕ್ಕಿಯ ಸಂಗ್ರಹ ಇದೆ. ಹೀಗಾಗಿ ಜುಲೈ ತಿಂಗಳಲ್ಲಿ 25 ಸಾವಿರ ಟನ್ ಅಕ್ಕಿಯನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ ಎಂದರು.5 ಲಕ್ಷ ಟನ್ ಲೆವಿ ಸಂಗ್ರಹ:  ಪ್ರತಿ ವರ್ಷ 5 ಲಕ್ಷ ಟನ್ ಅಕ್ಕಿಯನ್ನು ಲೆವಿ ರೂಪದಲ್ಲಿ ಸಂಗ್ರಹಿಸಬೇಕು ಎಂಬ ಗುರಿ ಇದೆ. ಆದರೆ, ಅದಕ್ಕಾಗಿ ಅಕ್ಕಿ ಗಿರಣಿಗಳ ಮೇಲೆ ಒತ್ತಡ ಹೇರುತ್ತಿರಲಿಲ್ಲ. ಹೀಗಾಗಿ ಕಳೆದ ವರ್ಷ ಕೇವಲ 50 ಸಾವಿರ ಟನ್ ಸಂಗ್ರಹವಾಗಿತ್ತು. ಮುಂದಿನ ವರ್ಷದಿಂದ 5 ಲಕ್ಷ ಟನ್ ಸಂಗ್ರಹಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಆಗಸ್ಟ್ ತಿಂಗಳಿಂದ ಅಗತ್ಯವಿರುವ ಅಕ್ಕಿ ಖರೀದಿಗೆ ಟೆಂಡರ್ ಕರೆಯಲಾಗುವುದು. ಟೆಂಡರ್‌ನಲ್ಲಿ ಭಾಗವಹಿಸುವವರು ಈಗ ಖರೀದಿ ಮಾಡಿರುವುದ ಕ್ಕಿಂತ ಹೆಚ್ಚಿನ ದರ ನಮೂದಿಸಿದರೆ ಆ ಪ್ರಸ್ತಾವನೆ ತಿರಸ್ಕರಿಸಿ, ಛತ್ತೀಸಗಡದಿಂದಲೇ ಖರೀದಿಸಲಾಗುವುದು. ಕಡಿಮೆ ದರ ನಮೂದಿಸಿದರೆ ಟೆಂಡರ್ ಮೂಲಕವೇ ಖರೀದಿಸಲಾಗುವುದು ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಕುಟುಂಬಗಳಿಗೆ ಅಕ್ಕಿ ನೀಡುವುದನ್ನು ಮಾರ್ಚ್‌ನಲ್ಲೇ ನಿಲ್ಲಿಸಲಾಗಿದೆ. ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದು ಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ತಾತ್ಕಾಲಿಕ ಪಡಿತರ ಚೀಟಿಗಳನ್ನು ಹೊಂದಿರುವವರು ಜುಲೈ 31ರ ಒಳಗೆ ಕಾಯಂ ಪಡಿತರ ಚೀಟಿ ಪಡೆದು ಕೊಳ್ಳಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಪಡೆಯದೆ ಇದ್ದರೆ ಆಹಾರ ಧಾನ್ಯಗಳ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಪಡಿಸಲಾಗುತ್ತಿದೆ. 14 ಲಕ್ಷ ತಾತ್ಕಾಲಿಕ ಪಡಿತರ ಚೀಟಿದಾರರು ಇನ್ನೂ ಕಾಯಂ ಪಡಿತರ ಚೀಟಿ ಪಡೆದಿಲ್ಲ. ಸದ್ಯ 78 ಲಕ್ಷ ಬಿಪಿಎಲ್ ಹಾಗೂ 19 ಲಕ್ಷ ಅಂತ್ಯೋದಯ ಕಾರ್ಡ್‌ಗಳು ಇವೆ. ಅಕ್ಕಿ ಬೇಡ ಎನ್ನುವವರು ಗೋಧಿ ಪಡೆಯಬಹುದು ಎಂದರು. ಸಬ್ಸಿಡಿ ವೆಚ್ಚರೂ4,400:  ಈ ಮುಂಚೆ ಅಕ್ಕಿ ಸಬ್ಸಿಡಿಗೆ ವಾರ್ಷಿಕ ್ಙ1,250 ಕೋಟಿ ವೆಚ್ಚವಾಗುತ್ತಿತ್ತು. ಇನ್ನು ಮುಂದೆರೂ4,400 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.