ಬುಧವಾರ, ನವೆಂಬರ್ 13, 2019
28 °C

ರೂ 10 ಲಕ್ಷದ ಅಕ್ರಮ ಮದ್ಯ ವಶ

Published:
Updated:

ಗುಲ್ಬರ್ಗ: ಆಳಂದ ತಾಲ್ಲೂಕಿನ  ನಿರಗುಡಿ ಬಳಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬ್ರಾಂಡ್ ರಹಿತ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.ಮಹಾರಾಷ್ಟ್ರದಿಂದ ಆಳಂದಕ್ಕೆ ತರಲಾಗುತ್ತಿದ್ದ 550 ಮದ್ಯದ ಬಾಟಲಿಗಳ ಪೆಟ್ಟಿಗೆಗಳನ್ನು ಲಾರಿ ಸಹಿತ ಜಪ್ತಿ ಮಾಡಿದ್ದಾರೆ.ಜಪ್ತಿ ಮಾಡಿದ ಸೊತ್ತುಗಳ ಒಟ್ಟು ಮೌಲ್ಯ 10.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಲಾರಿ ಚಾಲಕ ಖಾದರ್‌ಖಾನ್ ಎಂಬಾತನನ್ನು ಬಂಧಿಸಲಾಗಿದೆ.

ಪ್ರತಿಕ್ರಿಯಿಸಿ (+)