ರೂ 10464 ಕೋಟಿ ದಂಡ: ಎಚ್‌ಎಸ್‌ಬಿಸಿ ಸಿದ್ಧ

7

ರೂ 10464 ಕೋಟಿ ದಂಡ: ಎಚ್‌ಎಸ್‌ಬಿಸಿ ಸಿದ್ಧ

Published:
Updated:

ಲಂಡನ್(ಪಿಟಿಐ): ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮಗೊಳಿಸುವ ಮೂಲಕ ಅಮೆರಿಕದ ಕಾನೂನು ಉಲ್ಲಂಘಿಸಿದ ಆರೋಪಕ್ಕೊಳಗಾಗಿರುವ ಬ್ಯಾಂಕಿಂಗ್ ದಿಗ್ಗಜ `ಎಚ್‌ಎಸ್‌ಬಿಸಿ', ಈಗ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಭಾರಿ ದಂಡ ತೆರಲು ಮುಂದಾಗಿದೆ.

ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಚ್‌ಎಸ್‌ಬಿಸಿ, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮ ಮತ್ತು ಮಾದಕವಸ್ತು ಚಟುವಟಿಕೆಗೆ ಹಣ ವರ್ಗಾವಣೆಗೆ ನೆರವು ನೀಡಿದೆ. ಆ ಮೂಲಕ ಇಲ್ಲಿನ ಹಣಕಾಸು ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ವಂಚಿಸಿದೆ ಎಂದು ಅಮೆರಿಕದ ಸಂಸತ್ ಆರೋಪಿಸಿದ್ದಿತು.ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರಕ್ಕೆ 192 ಕೋಟಿ ಡಾಲರ್(ರೂ10464 ಕೋಟಿ) ದಂಡ ಪಾವತಿಸುವುದಾಗಿ ಎಚ್‌ಎಸ್‌ಬಿಸಿ ಪ್ರಕಟಿಸಿದೆ. ಆ ಮೂಲಕ, ಅಕ್ರಮ ಚಟುವಟಿಕೆಗಳಿಗೆ ನೆರವು ಪ್ರಕರಣದಿಂದ ಹೊರಬರಲು `ದಂಡ ಪಾವತಿ' ಪರಿಹಾರ ಸೂತ್ರ ಮಂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry