ಶನಿವಾರ, ಫೆಬ್ರವರಿ 27, 2021
28 °C

ರೂ 11 ಲಕ್ಷ ಮೌಲ್ಯದ ಸೀರೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂ 11 ಲಕ್ಷ ಮೌಲ್ಯದ ಸೀರೆ ವಶ

ಹುಬ್ಬಳ್ಳಿ: ಯಾವುದೇ ರಸೀತಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 11 ಲಕ್ಷ ಮೌಲ್ಯದ ಸೀರೆಗಳನ್ನು ತಾಲ್ಲೂಕಿನ ಶೆರೇವಾಡ ಗ್ರಾಮದ ಬಳಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸೀರೆ ಸಾಗಿಸುತ್ತಿದ್ದ ಟೆಂಪೊವನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ರಾಮ­ಚಂದ್ರಸಾ ಬದ್ದಿ ಎಂಬುವರನ್ನು ಬಂಧಿಸಲಾಗಿದೆ. ‘ಸಂಜೆ 5.30ರ ಸುಮಾರಿಗೆ ಶೆರೇ­ವಾಡ ಬಳಿಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುವಾಗ ಈ ಟೆಂಪೊ­ದಲ್ಲಿ ಸೀರೆಗಳ ಬಂಡಲ್‌  ಪತ್ತೆಯಾಯಿತು. ಆದರೆ ಈ ಕುರಿತು ಚಾಲಕ ಯಾವುದೇ ದಾಖಲೆ ನೀಡಿಲ್ಲ.ಹೀಗಾಗಿ ಅವನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸ­ಲಾಯಿತು. ಈ ವಸ್ತುಗಳನ್ನು ಹುಬ್ಬಳ್ಳಿಯಿಂದ ಗದಗಕ್ಕೆ ಒಯ್ಯುತ್ತಿದ್ದುದಾಗಿ ಚಾಲಕ ತಿಳಿಸಿದ್ದಾನೆ. ಇವುಗಳ ಮಾಲೀಕರು ಯಾರು ಎಂಬುದು ಇನ್ನೂ ಪತ್ತೆ­ಯಾ­ಗಿಲ್ಲ’ ಎಂದು ಎಸ್‌ಎಸ್‌ಸಿ ಮಾಜಿಸ್ಟ್ರೇಟ್‌ ಭೀಮನಗೌಡ ಪಾಟೀಲ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.