ಗುರುವಾರ , ನವೆಂಬರ್ 21, 2019
21 °C

ರೂ 125ಕೋಟಿ ಸಂಗ್ರಹ: ವಾಲ್ಮಾರ್ಕ್ ರಿಯಾಲ್ಟಿ ಗುರಿ

Published:
Updated:

ಬೆಂಗಳೂರು: ನಗರದ `ವಾಲ್ಮಾರ್ಕ್ ಇನ್ಫ್ರಾ ಅಂಡ್ ರಿಯಾಲ್ಟಿ ಟ್ರಸ್ಟ್' 5 ವರ್ಷದ `ವಾಲ್ಮಾರ್ಕ್ ರಿಯಾಲ್ಟಿ ಫಂಡ್' ಪರಿಚಯಿಸಿದ್ದು, ್ಙ125 ಕೋಟಿ ಸಂಗ್ರಹ ಗುರಿ ಇಟ್ಟುಕೊಂಡಿದೆ.`ಪರ್ಯಾಯ ಹೂಡಿಕೆ ನಿಧಿ ಶ್ರೇಣಿ-2ರಲ್ಲಿ ಬರುವ ಖಾಸಗಿ ಕಂಪೆನಿಗಳಲ್ಲಿ ವಿನಿಯೋಜಿಸುವ ಯೋಜನೆಯಾಗಿದೆ. ಕನಿಷ್ಠ ಹೂಡಿಕೆ ್ಙ1 ಕೋಟಿ' ಎಂದು ಮಾನ್ಯತಾ -ವಾಲ್ಮಾರ್ಕ್ ಸಮೂಹ ಸಂಸ್ಥಾಪಕ ತೇಜ್‌ರಾಜ್ ಗುಲೇಛಾ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಂಗ್ರಹವಾಗುವ ಹಣವನ್ನು `ದ ಗ್ರೀನ್ಸ್' ಸೇರಿದಂತೆ ನಗರದ ಐದಾರು ಗೃಹ ನಿರ್ಮಾಣ ಸಂಸ್ಥೆಗಳಲ್ಲಿ ಹೂಡಲಾಗುವುದು. ನಿಗದಿತ ಯೋಜನೆ ಪೂರ್ಣಗೊಂಡ ನಂತರ ಬರುವ ಲಾಭದಲ್ಲಿ ಹೂಡಿಕೆದಾರರಿಗೆ ಶೇ 80, ಸಂಸ್ಥಾಪಕರಿಗೆ ಶೇ 20ರಷ್ಟು ಪಾಲು ಲಭ್ಯ. ವಾರ್ಷಿಕ ಶೇ 15ರಷ್ಟು ಗಳಿಕೆ ಖಚಿತ ಎಂದು `ಮುನೋತ್ ಫೈನಾನ್ಷಿಯಲ್ಸ್' ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಸ್ವಂತ್ ಮುನೋತ್ ವಿವರಿಸಿದರು.

ಪ್ರತಿಕ್ರಿಯಿಸಿ (+)