ರೂ 1.31ಕೋಟಿ ಪತ್ತೆ: 3 ಬಂಧನ

7

ರೂ 1.31ಕೋಟಿ ಪತ್ತೆ: 3 ಬಂಧನ

Published:
Updated:

ದಾವಣಗೆರೆ: ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಾಗಿಸುತ್ತಿದ್ದ ಮೂವರನ್ನು ಗ್ರಾಮಾಂತರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.ಬೆಂಗಳೂರಿನ ಜಯನಗರದಲ್ಲಿ ಜಿಲ್ಲಾ ನೋಂದಣಾಧಿಕಾರಿ ಆಗಿರುವ ಬೋರಪ್ಪ ಎಂಬುವವರಿಗೆ ಸೇರಿದ ಒಟ್ಟು ರೂ 1,31,37,500ವಶಪಡಿಸಿಕೊಳ್ಳಲಾಗಿದೆ. ಆರ್. ಮಲ್ಲಾರೆಡ್ಡಿ, ಚಂದ್ರಪ್ಪ ಮತ್ತು ಬಾನಪ್ಪ ಬಂಧಿತರು.

ವಿವರ: ನಕಲಿ ನೋಟುಗಳನ್ನು ಹೊಂದಿದ್ದ ಹದಡಿ ಸಮೀಪದ 7ನೇ ಮೈಲಿಕಲ್ಲು ಬಳಿಯ ನಿವಾಸಿ ಆರ್. ಮಲ್ಲಾರೆಡ್ಡಿ ಮನೆ ಮೇಲೆ ದಾಳಿ ನಡೆಸಿ, ಆತನನ್ನು ಬಂಧಿಸಿದಾಗ ಅವನ ಸ್ನೇಹಿತ ಚಂದ್ರಪ್ಪನ ಮನೆಯಲ್ಲಿ ರೂ. 96,90,000 ಹಣವನ್ನು ಸೂಟ್‌ಕೇಸಿನಲ್ಲಿ ಅಡಗಿಸಿಟ್ಟ ಮಾಹಿತಿ ದೊರೆತಿದೆ.

 

ಚಂದ್ರಪ್ಪನನ್ನು ವಿಚಾರಿಸಿದಾಗ ಆತ ನೋಂದಣಾಧಿಕಾರಿ ಬೋರಪ್ಪ ಎಂಬುವವರ ಹಣ ತನ್ನ ಬಳಿ ಇರುವುದಾಗಿ ತಿಳಿಸಿದ. ಅಲ್ಲದೇ ಬೋರಪ್ಪ ಅವರ ಸೂಚನೆಯಂತೆ ಇನ್ನಷ್ಟು ಹಣ ಮಲ್ಲಾರೆಡ್ಡಿ ಹಾಗೂ ಹದಡಿ ಗ್ರಾಮದ ಬಾನಪ್ಪ ಅವರ ಮನೆಯಲ್ಲಿ ಇಟ್ಟಿರುವುದಾಗಿಯೂ ಬಾಯಿಬಿಟ್ಟಿದ್ದಾನೆ.ಎಲ್ಲರ ಮನೆ ಮೇಲೆ ದಾಳಿ ನಡೆಸಲಾಯಿತು. ಬಾನಪ್ಪನು ದಾವಣಗೆರೆ ನಗರದ ಎಂಸಿಸಿ `ಬಿ~ಬ್ಲಾಕ್‌ನ ತನ್ನ ಸ್ನೇಹಿತ ಹರಿ ಎಂಬುವರ ಮನೆಯಲ್ಲಿ ಇರಿಸಿದ್ದ ರೂ 34,47,500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಡಿವೈಎಸ್ಪಿ ಡಿ.ಕೆ. ಕವಳಪ್ಪ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry