ಬುಧವಾರ, ಜೂನ್ 16, 2021
21 °C

ರೂ. 13,770 ಕೋಟಿ ಬಂಡವಾಳ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂ. 13,770 ಕೋಟಿ ಬಂಡವಾಳ ಹೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅಧ್ಯಕ್ಷತೆ­ಯಲ್ಲಿ ಮಂಗಳವಾರ ನಡೆದ ರಾಜ್ಯ ಉನ್ನತ ಮಟ್ಟದ ಸಮಿತಿ­ ರೂ. 13,770 ಕೋಟಿ ಬಂಡವಾಳ ಹೂಡಿ­ಕೆಯ 18 ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿತು.ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ಈ ಸಮಿತಿಯು 9 ತಿಂಗಳಲ್ಲಿ 3ನೇ ಬಾರಿ ಸಭೆ ಸೇರಿದ್ದು, ಇದುವರೆಗೂ ಒಟ್ಟು ರೂ. 36 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ. 18 ಯೋಜನೆಗಳಿಂದ 44,726 ಮಂದಿಗೆ ಉದ್ಯೋಗ ಸಿಗಲಿದೆ. ಯೋಜನೆಗಳ ಸಲುವಾಗಿ 2,700 ಎಕರೆ ಭೂಮಿ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಸಭೆಯ ಬಳಿಕ ತಿಳಿಸಿದರು.ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ನಿಯಮಗಳ ಪ್ರಕಾರವೇ ರೈತರಿಗೆ ಪರಿಹಾರ ನೀಡಲಾಗುವುದು. ಭೂಮಿ­ಯನ್ನು ಗುತ್ತಿಗೆ ರೂಪದಲ್ಲಿ ಮಂಜೂರು ಮಾಡಲಾಗುವುದು ಎಂದು ಹೇಳಿದರು.ತುಮಕೂರಿನಲ್ಲಿ ರಾಷ್ಟ್ರೀಯ ಉತ್ಪಾದನಾ ಬಂಡವಾಳ ವಲಯ (ಎನ್ ಎಮ್ ಐ ಜಡ್) ಸ್ಥಾಪನೆಗೆ ಕೇಂದ್ರದ ಅನುಮೋದನೆ ಸಿಕ್ಕಿದೆ. ಕೋಲಾರ, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿಯೂ ಉತ್ಪಾದನಾ ವಲಯ ಸ್ಥಾಪನೆಗೆ ಕೇಂದ್ರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇದರಿಂದ ಕೈಗಾರಿಕಾಭಿವೃದ್ಧಿ ಹಾಗೂ ಉದ್ಯೋಗ ಸೃಜನೆಗೆ ಅನುಕೂಲ ಆಗಲಿದೆ ಎಂದು ಹೇಳಿದರು.ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಅಕ್ಟೋ­ಬರ್‌­ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಸಮಾವೇಶ ಏರ್ಪಡಿಸಲು  ಈವೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿ ಮತ್ತು ಪಾಲು­ದಾರರ ಆಯ್ಕೆಗಾಗಿ ಟೆಂಡರ್‌ಗಳನ್ನು ಕರೆಯಲಾಗಿದೆ.  ಈ ಸಮಾವೇಶವು ೩೦  ದೇಶಗಳಿಂದ ಬಂಡವಾಳ ಹೂಡಿಕೆದಾ­ರರನ್ನು ಆಕರ್ಷಿಸಲಿದೆ ಎಂದರು.ಏಕ ಗವಾಕ್ಷಿ ಮೂಲಕ ಬರುವ ಅರ್ಜಿಗಳ ವಿಲೇವಾರಿಗಾಗಿ ಇ-– ಉದ್ಯಮಿ ಪೋರ್ಟಲ್‌ ಸ್ಥಾಪಿಸಲಾಗಿದೆ.  ಈ ಅನುಕೂಲ­ವನ್ನು ಇತರ ಇಲಾಖೆಗಳಿಗೂ ವಿಸ್ತರಿಸಲಾಗುವುದು.  ಸರ್ಕಾ­ರವು ವ್ಯಾಪಾರ ಮತ್ತು ಕೈಗಾ­ರಿಕಾ ವಾತಾವರಣವನ್ನು ಸುಲಭ ಮಾಡಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿವರಿಸಿದರು.ಮೂಲಸೌಲಭ್ಯ ಸಚಿವ ಆರ್.ರೋಷನ್‌ಬೇಗ್‌ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.