ರೂ 1.5 ಲಕ್ಷ ಮೌಲ್ಯದ ಮೆಕ್ಕೆಜೋಳ ಹಾನಿ

7

ರೂ 1.5 ಲಕ್ಷ ಮೌಲ್ಯದ ಮೆಕ್ಕೆಜೋಳ ಹಾನಿ

Published:
Updated:

ಹರಿಹರ: ತಾಲ್ಲೂಕು ಶೇರಾಪುರ ಗ್ರಾಮದಲ್ಲಿರುವ ಪಿಎಲ್‌ಡಿ ಬ್ಯಾಂಕ್ ಗೌಡ್ರ ಮಲ್ಲೇಶಪ್ಪ ಕಣದಲ್ಲಿದ್ದ ಮೆಕ್ಕೆಜೋಳದ ರಾಶಿಗೆ ಗುರುವಾರ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ್ಙ 1.5ಲಕ್ಷ ಹಾನಿ ಸಂಭವಿಸಿದೆ.ದೊಗ್ಗಳ್ಳಿಯಿಂದ ಅದೇ ಮಾರ್ಗದಲ್ಲಿ ಬರುತ್ತಿದ್ದ ಮಲ್ಲೇಶಪ್ಪ ಅವರ ಮಗನಿಗೆ ಬೆಂಕಿ ಹೊತ್ತಿ ಉರಿಯುವ ದೃಶ್ಯ ಕಂಡಿತು. ಆತ ಕೂಡಲೇ ಮೊಬೈಲ್ ಮೂಲಕ ಮಲ್ಲೇಶಪ್ಪ ಅವರಿಗೆ ವಿಷಯವನ್ನು ತಿಳಿಸಿದ. ಅವರು ಅಗ್ನಿಶಾಮಕ ಕಚೇರಿಗೆ ವಿಷಯ ತಿಳಿಸಿದರು. ಅಗ್ನಿಶಾಮಕ ಸೇವೆ ಮತ್ತು ತುರ್ತ ಸೇವಾ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಪಕ್ಕದ ಹೊಲದಲ್ಲಿ ನಾಟಿ ಕೂಳಿ ಸುಡಲು ಹಾಕಿದ ಬೆಂಕಿ ಗಾಳಿಗೆ ಹರಡಿಕೊಂಡು ಬೆಂಕಿ ತಗುಲಿರಬಹುದು ಎಂದು ಮಲ್ಲೇಶಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry