ರೂ 150 ಬೆಲೆಯ ವಿಶೇಷ ನಾಣ್ಯ

7

ರೂ 150 ಬೆಲೆಯ ವಿಶೇಷ ನಾಣ್ಯ

Published:
Updated:

ನವದೆಹಲಿ (ಪಿಟಿಐ): ದೇಶದ ನಾಣ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರೂ 150 ಬೆಲೆಯ ವಿಶೇಷ ನಾಣ್ಯಗಳನ್ನು ಮುದ್ರಿಸಲು ನಿರ್ಧರಿಸಿದೆ.ದೇಶದಲ್ಲಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ 150 ವರ್ಷಗಳ ಸ್ಮರಣಾರ್ಥ ಈ ವಿಶೇಷ ನಾಣ್ಯಗಳನ್ನು ಮುದ್ರಿಸಲಾಗುತ್ತಿದೆ. ಈ ವಿಶಿಷ್ಟ ನಾಣ್ಯವನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2011-12ನೇ ಸಾಲಿನ ಬಜೆಟ್ ಮಂಡನೆ ಪೂರ್ವ ಬಿಡುಗಡೆ ಮಾಡಲಿದ್ದಾರೆ.ಆದಾಯ ತೆರಿಗೆ ಇಲಾಖೆಗೆ  (1860-2010) 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರೂ 5 ಬೆಲೆಯ ನಾಣ್ಯಗಳನ್ನೂ ಹೊರತರಲಾಗುವುದು. 150 ನಾಣ್ಯಗಳನ್ನು ಕೇಂದ್ರ ಸರ್ಕಾರವು ಮುದ್ರಿಸುತ್ತಿರುವುದು ಇದೇ ಮೊದಲು. ಈ ನಾಣ್ಯವನ್ನು  ಬೆಳ್ಳಿ, ತಾಮ್ರ, ನಿಕಲ್ ಮತ್ತು ಸತುವಿನಿಂದ ಕೂಡಿದ ಮಿಶ್ರ ಲೋಹದಿಂದ ತಯಾರಿಸಲಾಗುವುದು. ‘ಸತ್ಯಮೇವ ಜಯತೆ’ ಮತ್ತು ಭಾರತ ಮುದ್ರಿಸಲಾಗುವುದು. ಇನ್ನೊಂದು ಬದಿ ಚಾಣಕ್ಯ, ಕಮಲದ ಹೂ ಜತೆ ಜೇನುಹುಳ ಮುದ್ರಿಸಲಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry