ರೂ 1.70 ಕೋಟಿ ಮೌಲ್ಯದ ವಸ್ತು ವಶ

7

ರೂ 1.70 ಕೋಟಿ ಮೌಲ್ಯದ ವಸ್ತು ವಶ

Published:
Updated:

ಬೆಂಗಳೂರು: ಕೇಂದ್ರ ವಿಭಾಗದ ಪೊಲೀಸರು ನೂರು ಪ್ರಕರಣಗಳನ್ನು ಪತ್ತೆ ಮಾಡಿ 1.70 ಕೋಟಿ ರೂಪಾಯಿ ಮೌಲ್ಯದ ಆಭರಣ, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಒಟ್ಟು 67 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ಕೆ.ಜಿ. ಚಿನ್ನದ ಆಭರಣ, ಆರು ಕೆ.ಜಿ. ಬೆಳ್ಳಿಯ ವಸ್ತುಗಳನ್ನು ಸಿಬ್ಬಂದಿ ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಇಪ್ಪತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ರಾಜುಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ಶೇಷಾದ್ರಿಪುರ ಒಂದನೇ ಬ್ಲಾಕ್‌ನಲ್ಲಿರುವ ಜಯರಾಮ್ ಎಂಬುವರ ಮನೆಯಲ್ಲಿ ಆತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜಯರಾಮ್ ಅವರು ಊರಿಗೆ ಹೋಗಿದ್ದಾಗ ಆತ ಕಳವು ಮಾಡಿದ್ದ.

 

ಐನೂರು ಗ್ರಾಂ ಆಭರಣ, ಮೂರು ಕೆ.ಜಿ. ಬೆಳ್ಳಿ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಎಂದು ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಎಚ್.ಎಂ. ಓಂಕಾರಯ್ಯ ತಿಳಿಸಿದ್ದಾರೆ. ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದು ಎಂದು ಆತ ಮನೆಯ ತುಂಬ ನೀರು ಚೆಲ್ಲಿದ್ದ ಎಂದು ಅವರು ಹೇಳಿದ್ದಾರೆ.ಮಕ್ಕಳನ್ನು ಬಳಸಿಕೊಂಡು ಕಳವು ಮಾಡುತ್ತಿದ್ದ ಆರೋಪದ ಮೇಲೆ ವಿಲ್ಸನ್ ಗಾರ್ಡನ್‌ನ ವಿನಾಯಕ ನಗರದ ಅಜಯ್, ಜ್ಯೋತಿ ಮತ್ತು ನಾಗರತ್ನ ಎಂಬುವರನ್ನು ಪೊಲೀಸರು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಶ್ರೀನಿವಾಸ್ ಎಂಬುವರ ಮನೆಯಲ್ಲಿ ಅವರು ಕಳವು ಮಾಡಿದ್ದರು. ಶ್ರೀನಿವಾಸ್ ಅವರ ಅಕ್ಕ ಪಕ್ಕದ ಮನೆಯ ಮಕ್ಕಳಿಗೆ ಚಾಕೋಲೇಟ್ ನೀಡಿದ್ದ ಆರೋಪಿಗಳು ಮನೆ ಮತ್ತು ಅಲ್ಮೇರಾದ ಕೀ ತಂದುಕೊಡುವಂತೆ ಹೇಳಿದ್ದರು. ಮಕ್ಕಳ ತಂದು ಕೊಟ್ಟಿದ್ದ ಕೀ ಬಳಸಿ ನಕಲಿ ಕೀ ಮಾಡಿಸಿ ಮನೆಯಲ್ಲಿ ಐವತ್ತು ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು ಎಂದು ಇನ್‌ಸ್ಪೆಕ್ಟರ್ ಕಾಶಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry