ರೂ 1.75 ಲಕ್ಷ ಮೌಲ್ಯದ ಆಭರಣ, ನಗದು ಕಳವು

ಭಾನುವಾರ, ಜೂಲೈ 21, 2019
21 °C

ರೂ 1.75 ಲಕ್ಷ ಮೌಲ್ಯದ ಆಭರಣ, ನಗದು ಕಳವು

Published:
Updated:

ಚಾಮರಾಜನಗರ: ನಗರದ ಅರಣ್ಯ ನರ್ಸರಿ ಸರ್ವಿಸ್ ಸಮೀಪದ ಮನೆಯಲ್ಲಿ ಸುಮಾರು ರೂ. 1.75 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.ತಾಲ್ಲೂಕಿನ ಅರಕಲವಾಡಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಬಸವರಾಜು  ಅವರ ಮನೆಯ ಬೀಗ ಮುರಿದು 80 ಗ್ರಾಂ ಚಿನ್ನ ಮತ್ತು 63 ಸಾವಿರ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಒಟ್ಟು 1.75 ಲಕ್ಷ ಮೌಲ್ಯದ ವಸ್ತುಗಳು ಕಳವು ಮಾಡಲಾಗಿದೆ.ಕಾಲೇಜಿನಲ್ಲಿದ್ದ ಬಸವರಾಜು ಅವರಿಗೆ ಪಕ್ಕದ ಮನೆಯವರು ದೂರವಾಣಿ ಮೂಲಕ ಮನೆಯ ಬಾಗಿಲು ತೆರೆದಿರುವ ವಿಷಯ ತಿಳಿಸಿದರು. ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಯಿತು. ಬಸವರಾಜು ಪತ್ನಿಯೂ ಸಹ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ.ಪಟ್ಟಣ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry