ಬುಧವಾರ, ನವೆಂಬರ್ 20, 2019
26 °C

ರೂ 2.46 ಕೋಟಿ ಮೌಲ್ಯದ ವಸ್ತು ವಶ: 18 ಜನ ಸೆರೆ

Published:
Updated:
ರೂ 2.46 ಕೋಟಿ ಮೌಲ್ಯದ ವಸ್ತು ವಶ: 18 ಜನ ಸೆರೆ

ಬೆಂಗಳೂರು: ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿ ಚಿನ್ನಾಭರಣ ಸೇರಿದಂತೆ ಸುಮಾರು ರೂ 2.46 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.`ಸರಗಳವು, ಕನ್ನಕಳವು ಮತ್ತು ವಂಚನೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ 18 ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಸುಮಾರು 7 ಕೆ.ಜಿ ಚಿನ್ನಾಭರಣ, ಎರಡು ಕೆ.ಜಿ ಬೆಳ್ಳಿ ವಸ್ತು, ಕಾರು ಹಾಗೂ ಕಂಪ್ಯೂಟರ್‌ಜಪ್ತಿ ಮಾಡಿದ್ದಾರೆ' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`65 ಸರಗಳವು  ಹಾಗೂ 6 ವಂಚನೆ ಪ್ರಕರಣ ಪತ್ತೆ ಮಾಡಿರುವ ಸಿಬ್ಬಂದಿಗೆ ನಗದು ಬಹುಮಾನ ನೀಡಲಾಗುತ್ತದೆ. ಬಂಧಿತರು ತುಮಕೂರು, ಹಾಸನ, ಮೈಸೂರು ಜಿಲ್ಲೆ ಹಾಗೂ ನಗರದ ವಿವಿಧೆಡೆ ಸರ ದೋಚಿದ್ದರು. ಮನೆಗಳಲ್ಲಿ ಆಭರಣ ಕಳವು ಮಾಡಿದ್ದರು.ಅವನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು ಎಂದರು.ಆಂಧ್ರಪ್ರದೇಶ ಮೂಲದ ಮೆಹಬೂಬ್ ಪಾಷಾ (35), ತಮಿಳುನಾಡು ಮೂಲದ ಸಂತೋಷ್ (29), ಶಿವಮೊಗ್ಗ ಜಿಲ್ಲೆಯ ಹರೀಶ್‌ಕುಮಾರ್ (36), ಕೋಲಾರ ಜಿಲ್ಲೆಯ ಖಾದರ್ ಬಾಷಾ (32), ಹೊಸಕೋಟೆಯ ಮುಷೀರ್ ಖಾನ್ (39), ದೇವರಚಿಕ್ಕನಹಳ್ಳಿಯ ದೀಪಕ್ (30), ಸಿಂಗಸಂದ್ರದ ಸತೀಶ್ (27), ಬಿಳೇಕಹಳ್ಳಿಯ ಅಲೆಗ್ಸಾಂಡರ್ ವಿನೋದ್ (31), ವಿಲಿಯಮ್ಸ ಟೌನ್‌ನ ಜಾನ್ ಮೆಲ್ವಿನ್ (40), ಪುಲಿಕೇಶಿನಗರದ ಚಕ್ರವರ್ತಿ (38), ವಿವೇಕನಗರದ ಈಶ್ವರ (38), ಹಳೆ ಬಾಗಲೂರು ಲೇಔಟ್‌ನ ಆಲ್ಬರ್ಟ್ (35), ವಿಜಯನಗರದ ವಿನೋದ್‌ಕುಮಾರ್ ರೂನ್‌ವಾಲ (38), ಕತ್ತರಿಗುಪ್ಪೆಯ ಮಣಿಕಂಠ (25), ಚಂದ್ರಾಲೇಔಟ್‌ನ ಬಾಬು (23), ಬಾಗಲೂರಿನ ಶೇಖ್ ಸಲೀಂ (30), ಕಾಟನ್‌ಪೇಟೆಯ ಮುದಾಸಿರ್ ಪಾಷಾ (24) ಮತ್ತು ನ್ಯೂ ಬಿಇಎಲ್ ರಸ್ತೆಯ ಉವೇಜ್ (25) ಬಂಧಿತರು.

ಪ್ರತಿಕ್ರಿಯಿಸಿ (+)