ಶನಿವಾರ, ಏಪ್ರಿಲ್ 17, 2021
32 °C

ರೂ 250 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ನಾಗಮಂಗಲ ಕ್ಷೇತ್ರ ಸೇರಿದಂತೆ ಕೊಪ್ಪ ವ್ಯಾಪ್ತಿಯಲ್ಲಿ 250ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಸುರೇಶಗೌಡ ಸೋಮವಾರ ತಿಳಿಸಿದರು.ಕೊಪ್ಪ ವ್ಯಾಪ್ತಿಯ ಕೌಡ್ಲೆ- ಕೆ.ಮಲ್ಲಿಗೆರೆ-ಕೋಡಿಹಳ್ಳಿ ಸಂಪರ್ಕಿ ಸುವ ರಸ್ತೆ ಹಾಗೂ ಚಿಕ್ಕಹೊಸಗಾವಿ ಯಲ್ಲಿ 25ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಇನ್ನು ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿಗೆ 80ಕೋಟಿ ರೂಪಾಯಿ ಹಣ ಅಗತ್ಯವಾಗಿದ್ದು, ಮುಖ್ಯಮಂತ್ರಿ ಹಣ ಬಿಡುಗಡೆಗೆ ಭರವಸೆ ನೀಡಿದ್ದಾರೆ ಎಂದರು.ಕೊಪ್ಪಕೆರೆ ಆಧುನಿಕರಣಗೊಳಿಸಿ ವಿ.ಸಿ.ನಾಲೆಯಿಂದ ನೀರು ತುಂಬಿಸಿ 45ಹಳ್ಳಿಗಳಿಗೆ 29ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಒದಗಿಸುವ ಕಾಮಗಾರಿಗೆ ಹಣ ಬಿಡುಗಡೆಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.50ಕೋಟಿ ರೂಪಾಯಿ ವೆಚ್ಚದಲ್ಲಿ ಶಿಂಷಾ ವ್ಯಾಪ್ತಿಯ ನಾಲೆಗಳ ಆಧುನೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಆರಂಭಗೊಳ್ಳಬೇಕಿದೆ ಎಂದು ವಿವರಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಶಿವಲಿಂಗೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ ಚಂದ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಹೊಸಗಾವಿ ಪುಟ್ಟಸ್ವಾಮಿ, ಕೌಡ್ಲೆ ಡಿ.ರಮೇಶ್, ಸದಸ್ಯ ಪುಟ್ಟಾಚಾರಿ, ಜಗದೀಶ್, ಚಂದ್ರಶೇಖರ್, ನಂಜುಂಡಯ್ಯ, ಮುಖಂಡರಾದ ಮಾದೇಶ್, ವೈರಮುಡಿ, ಪುಟ್ಟ ಚೆನ್ನಯ್ಯ, ಶಿವಲಿಂಗಯ್ಯ, ಧನಂಜಯ, ಹುಚ್ಚಪ್ಪ, ಕರಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.