ರೂ 3 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

7

ರೂ 3 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

Published:
Updated:

ಪೀಣ್ಯ ದಾಸರಹಳ್ಳಿ:  ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟೆ ವಾರ್ಡ್ ವ್ಯಾಪ್ತಿಯ ಸೌಂದರ್ಯ ಬಡಾವಣೆ, ಬಿಟಿಎಸ್ ಬಡಾವಣೆ, ಮುನೇಶ್ವರ ನಗರ, ಮಂಜುನಾಥ ನಗರ, ಭುವನೇಶ್ವರಿನಗರ, ಬಾಗಲಗುಂಟೆ ಸೇರಿದಂತೆ ವಿವಿಧ ಕಡೆಗಳಲ್ಲಿ  ಮೂರು ಕೋಟಿ ರೂಪಾಯಿ  ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಈಚೆಗೆ ಚಾಲನೆ ನೀಡಲಾಯಿತು.

 

ಕಾಮಗಾರಿಗಳಿಗೆ ಚಾಲನೆ  ನೀಡಿದ ಶಾಸಕ ಎಸ್.ಮುನಿರಾಜು ಮಾತನಾಡಿ, `ಗುತ್ತಿಗೆದಾರರು ಗುಣಮಟ್ಟದ ಬಗ್ಗೆ ಆದ್ಯತೆನೀಡಬೇಕು. ಆಗ ಗುತ್ತಿಗೆದಾರರಿಗೂ ಕೀರ್ತಿ ಬರುತ್ತದೆ~ ಎಂದರು.ಪಾಲಿಕೆ ಸದಸ್ಯ ಬಿ.ಆರ್.ಚಂದ್ರಶೇಖರ್, ಮುಖಂಡರಾದ ಗಂಗರಾಜು, ಸಿ.ಬಿ.ಶಂಕರೇಗೌಡ, ನಾರಾಯಣ್, ಕೃಷ್ಣಮೂರ್ತಿ, ರಾಜೇಶ್ವರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry