ಶುಕ್ರವಾರ, ಆಗಸ್ಟ್ 23, 2019
21 °C

ರೂ 3 ಲಕ್ಷ ಮೌಲ್ಯದ ಮರಳು ವಶ

Published:
Updated:

ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿ ಗಡಿಭಾಗದ ಡಿಪಿಟಿ ಡ್ಯಾಂ ಕೆರೆಯಂಗಳದಿಂದ ಬೋಗನಹಳ್ಳಿ ಸಮೀಪ ಸರ್ಕಾರಿ ಜಮೀನಿನಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿಕೊಂಡು, ಮರಳು ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ತಹಶೀಲ್ದಾರ್ ಎಚ್.ವಿ.ವಿಜಯರಾಜು ಹಾಗೂ ಕಂದಾಯ ಅಧಿಕಾರಿಗಳ ತಂಡ ಗುರುವಾರ ರಾತ್ರಿ ದಾಳಿ ನಡೆಸಿ ಸುಮಾರು ರೂ 3 ಲಕ್ಷ ಮೌಲ್ಯದ 20 ಮರಳನ್ನು ವಶಪಡಿಸಿಕೊಂಡಿದೆ.ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಮಿಟ್ಲಕಟ್ಟೆ, ಮತ್ಸಮುದ್ರ, ಘಟಪರ್ತಿ, ಬೂದಿಹಳ್ಳಿ ಗ್ರಾಮಗಳ ಸಮೀಪ ಹಾದು ಹೋಗುವ ವೇದಾವತಿ ನದಿ ಪಾತ್ರದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬೋಗನಹಳ್ಳಿ ಹತ್ತಿರ ಮರಳು ದಂಧೆ ಮೇಲೆ ದಾಳಿ  ನಡೆಸಿದ್ದಾರೆ.ಆಂಧ್ರದ ಮರಳು ದಂಧೆಕೋರರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕೈವಾಡವಿರುವುದು ಬೆಳಕಿಗೆ ಬಂದಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.ಕಂದಾಯ ನಿರೀಕ್ಷಕ ಮರಿ ಬಸಪ್ಪ, ಗ್ರಾಮ ಲೆಕ್ಕಾಧಿಕಾರಿ ಮಂಜಣ್ಣ, ಮಾರುತಿ, ಸಿಬ್ಬಂದಿ ನರೇಶ, ಜಯರಾಂ ಉಪಸ್ಥಿತರಿದ್ದರು.

Post Comments (+)