ರೂ 30 ಸಾವಿರಕ್ಕಿಂತ ಕೆಳಕ್ಕಿಳಿದ ಚಿನ್ನ; ಬೆಳ್ಳಿ ರೂ 2205 ಇಳಿಕೆ

7

ರೂ 30 ಸಾವಿರಕ್ಕಿಂತ ಕೆಳಕ್ಕಿಳಿದ ಚಿನ್ನ; ಬೆಳ್ಳಿ ರೂ 2205 ಇಳಿಕೆ

Published:
Updated:

ಮುಂಬೈ/ನವದೆಹಲಿ(ಪಿಟಿಐ):  ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದಿಢೀರ್‌ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಚಿನಿವಾರ ಪೇಟೆ ಮುಂಬೈನಲ್ಲಿ ಚಿನ್ನ ಸಂಗ್ರಹಕಾರರು ತಮ್ಮಲ್ಲಿದ್ದ ಸರಕು ಮಾರಾಟ ಮಾಡಲು ಮುಗಿಬಿದ್ದಿದ್ದರಿಂದ ಬಂಗಾರದ ಧಾರಣೆ ಒಮ್ಮೆಲೇ ಗರಿಷ್ಠ ರೂ525ರವರೆಗೂ ಕುಸಿತ ಕಂಡಿತು.೧೦ ಗ್ರಾಂ ಚಿನ್ನ ಮುಂಬೈನಲ್ಲಿ ರೂ525ರಷ್ಟು ತಗ್ಗಿದ್ದರೆ, ನವದೆಹಲಿ ಯಲ್ಲಿ ಕೇವಲ ರೂ50ರಷ್ಟು ಕಡಿಮೆ ಆಯಿತು. ಸಿದ್ಧ ಬೆಳ್ಳಿಯಂತೂ   ಮುಂಬೈನಲ್ಲಿ ರೂ2,205ರಷ್ಟು(ಶೇ 4ರಷ್ಟು) ಭಾರಿ ಪ್ರಮಾಣದಲ್ಲಿ ಬೆಲೆ ಕಳೆದುಕೊಂಡಿದೆ. ನವದೆಹಲಿಯಲ್ಲಿ ಬೆಳ್ಳಿ ರೂ2000ದಷ್ಟು ಕೆಳಕ್ಕಿಳಿಯಿತು.ಮುಂಬೈ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ೨9,690ರಲ್ಲೂ, ಅಪರಂಜಿ ಚಿನ್ನ ರೂ೨9,840ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ50,225ರ ಲೆಕ್ಕದಲ್ಲಿ  ಮಾರಾಟವಾಯಿತು.ನವದೆಹಲಿ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ30,55೦ಕ್ಕೂ, ಅಪರಂಜಿ ಚಿನ್ನ ರೂ30,೭5೦ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ರೂ50,30೦ರ ಲೆಕ್ಕದಲ್ಲಿ ಮಾರಾಟವಾಯಿತು.5 ವಾರದ ಕನಿಷ್ಠ ದರ

ಲಂಡನ್‌ ವರದಿ: ಸಿರಿಯಾ ಮೇಲಿದ್ದ ಯುದ್ಧದ ಕಾರ್ಮೋಡ ಚದುರಿ ಮಾತುಕತೆಗೆ ಅವಕಾಶವಾಗಿರುವುದು ಮತ್ತು ಅಮೆರಿಕದ ಫೆಡರಲ್‌ ಬ್ಯಾಂಕ್‌ ಆರ್ಥಿಕ ಉತ್ತೇಜನ ಕ್ರಮಗಳನ್ನು ಮುಂದುವರಿಸಲಿದೆ ಎಂಬ ಊಹಾ ಪೋಹಗಳು ಅಂತರರಾಷ್ಟ್ರೀಯ ಚಿನಿವಾರ ಪೇಟೆ ಮೇಲೆ ಪರಿಣಾಮ ಬೀರಿದವು. ಇದು ಶುಕ್ರವಾರದ ವಹಿ ವಾಟಿನಲ್ಲಿ ಚಿನ್ನ ಧಾರಣೆ ಕಳೆದ ಐದು ವಾರಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿ ಯುವಂತೆ ಮಾಡಿತು.ಲಂಡನ್‌ ಪೇಟೆಯಲ್ಲಿ ಔನ್ಸ್ ಚಿನ್ನ 1,308.18 ಅಮೆರಿಕನ್‌ ಡಾಲರ್‌ ಮಟ್ಟಕ್ಕಿಳಿಯಿತು. ಇದು ಆಗಸ್ಟ್ 9ರ ನಂತರದ ದಿನಗಳಲ್ಲಿ ಚಿನ್ನದ ಕನಿಷ್ಠ ಧಾರಣೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry