ಶನಿವಾರ, ಜೂನ್ 19, 2021
26 °C

ರೂ. 3000 ಕೋಟಿ ‘ಎಫ್‌ಐಐ’ಹೂಡಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕಳೆದೊಂದು ವಾರದಿಂದ ಷೇರುಪೇಟೆ ಚಟುವಟಿಕೆ ಗರಿಗೆದರಿದೆ. ಇದಕ್ಕೆ ಕಾರಣ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರಿ ಪ್ರಮಾಣದಲ್ಲಿ ಷೇರು ಖರೀದಿಸುತ್ತಿರುವುದೇ ಆಗಿದೆ. ಒಂದು ವಾರದಲ್ಲಿ ಸಾಗರೋತ್ತರ ಹೂಡಿಕೆದಾರರಿಂದ ದೇಶದ ಷೇರುಪೇಟೆಗೆ ಒಟ್ಟು ರೂ. 3000 ಕೋಟಿಗೂ ಅಧಿಕ ಬಂಡವಾಳ ಹರಿದುಬಂದಿದೆ!ಏಪ್ರಿಲ್‌ನಲ್ಲಿ ಲೋಕಸಭೆಗೆ ಚುನಾವಣೆ ನಡೆಯುತ್ತಿರುವುದು ಮತ್ತು ಹೊಸ ಆಡಳಿತದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿರುವುದು ಬಂಡ­ವಾಳ ಹರಿಯುವಿಕೆಗೆ ಉತ್ತೇಜನ ನೀಡುತ್ತಿದೆ.ಮಾ. 3ರಿಂದ 7ರವರೆಗಿನ ಐದು ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ರೂ18,944 ಕೋಟಿ ಬೆಲೆಯ ಷೇರುಗಳನ್ನು ಖರೀದಿಸಿದ್ದಾರೆ.ಇದೇ ವೇಳೆ, ರೂ. 15,869 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ­ದ್ದಾರೆ.  ಇದರಿಂದಾಗಿ ಒಂದು ವಾರ­ದ­ಲ್ಲಿನ ‘ಎಫ್‌ಐಐ’ ಹೂಡಿಕೆ ₨3,075 ಕೋಟಿಯಷ್ಟಾಗಿದೆ ಎಂಬು­ದು ‘ಸೆಬಿ’ ಅಂಕಿ ಅಂಶಗಳಿಂದ ತಿಳಿದು­ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.