ಭಾನುವಾರ, ಜನವರಿ 26, 2020
22 °C

ರೂ 5 ಕೋಟಿ ವೆಚ್ಚದಲ್ಲಿ ಹಂಪಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಜನವರಿ 10, 11 ಹಾಗೂ 12ರಂದು ನಡೆಯಲಿರುವ ಹಂಪಿ ಉತ್ಸವಕ್ಕೆ ರೂ5 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೋಮವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ತಿರ್ಮಾನಿಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಸಚಿವ ಆರ್‌.ವಿ.­ದೇಶಪಾಂಡೆ, ಕಾರ್ಮಿಕ  ಸಚಿವ ಪಿ.ಟಿ.ಪರಮೇಶ್ವರ ನಾಯಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಉತ್ಸವದ ತಯಾರಿ ಕುರಿತು ಮಾಹಿತಿ ನೀಡಿದರು.‘ಕಳೆದ ಬಾರಿ ಹಂಪಿ ಉತ್ಸವಕ್ಕೆ ರೂ6 ಕೋಟಿ ವೆಚ್ಚವಾಗಿತ್ತು. ಈ ಬಾರಿ ಹಣದ ಕೊರತೆಯಿಂದಾಗಿ ರೂ 5 ಕೋಟಿಗೆ ಇಳಿಸ­ಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾ­ಸೋದ್ಯಮ ಇಲಾಖೆ ತಲಾ ರೂ 1 ಕೋಟಿ ಅನುದಾನ ನೀಡಲು ನಿರ್ಧ­ರಿಸಿವೆ. ರೂ 2.36 ಕೋಟಿಯನ್ನು ದೇಣಿಗೆ ಹಾಗೂ ಉತ್ಸವದ ಆದಾಯ­ದಿಂದ ಸಂಗ್ರಹಿಸ­ಲಾಗುವುದು. ಕೊರತೆ­ಯಾ­ಗುವ ಅನು­ದಾನ­ವನ್ನು ಎರಡೂ ಇಲಾಖೆಗಳು ಭರಿಸಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)