ಗುರುವಾರ , ಏಪ್ರಿಲ್ 15, 2021
26 °C

ರೂ. 55 ಕೋಟಿ ಅನುದಾನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಕಳೆದ ತಿಂಗಳು ರಾಜ್ಯ ಸರ್ಕಾರದಿಂದ ಚಿತ್ರದುರ್ಗ ನಗರಕ್ಕೆ ರೂ. 30 ಕೋಟಿ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮರು ಪಟ್ಟಣಗಳಿಗೆ ತಲಾ ರೂ. 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಒಟ್ಟಾರೆ ರೂ. 55 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.ನಗರದಲ್ಲಿ ಸೋಮವಾರ ಪುರಸಭೆ ವತಿಯಿಂದ ಮಹಾತ್ಮಗಾಂಧಿ ವೃತ್ತದ ಸಮೀಪ ನೂತನವಾಗಿ ನಿರ್ಮಿಸಿರುವ ನೆಹರು ಮಾರುಕಟ್ಟೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹಿರಿಯೂರು ನಗರಕ್ಕೆ ಹಿಂದಿನ ನಾಲ್ಕು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ರೂ. 100 ಕೋಟಿ  ಅನುದಾನ ಬಂದಿದೆ. ಇಡೀ ರಾಜ್ಯದಲ್ಲಿ ಕೊಳಚೆ ಪ್ರದೇಶಗಳಲ್ಲಿ ಶಾಶ್ವತ ನೆಲೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.ಬೆಂಗಳೂರಿನಲ್ಲಿ ಈಗ ಎದ್ದಿರುವ ಕಸದ ಸಮಸ್ಯೆಗೆ ಈಗಿನ ಕಾರ್ಪೋರೇಟರ್‌ಗಳನ್ನು ದೂಷಿಸಿ ಫಲವಿಲ್ಲ.  ಚಿತ್ರದುರ್ಗದಲ್ಲಿ ನಗರದಿಂದ 7 ಕಿ.ಮೀ. ದೂರದಲ್ಲಿ 35 ಎಕರೆ ಭೂಮಿ ಖರೀದಿಸಿ ಕಸ ಹಾಕಲು ವ್ಯವಸ್ಥೆ ಮಾಡಿದೆ. ಕಸದಿಂದ 1 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇನ್ನೂ ಆರಂಭವಾಗಿಲ್ಲ ಎಂದು ತಿಪ್ಪಾರೆಡ್ಡಿ ತಿಳಿಸಿದರು.ಶಾಸಕ ಡಿ. ಸುಧಾಕರ್ ಮಾತನಾಡಿ, ಹಿರಿಯೂರು ವೇಗವಾಗಿ ಬೆಳೆಯುತ್ತಿದ್ದು, ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ. ನಗರದಲ್ಲಿ ವಾಹನದಟ್ಟಣೆ ಕಡಿಮೆ ಮಾಡಲು ರೂ.14 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲಾಗಿದೆ.ಹರಿಶ್ಚಂಧ್ರ ಘಾಟ್ ನಿವಾಸಿಗಳಿಗೆ ಈ ತಿಂಗಳು ನಿವೇಶನ ಹಕ್ಕುಪತ್ರ ನೀಡಲಾಗುತ್ತದೆ. ಗೋಪಾಲಪುರ ಬಡಾವಣೆ ನಿವಾಸಿಗಳ ಸಮಸ್ಯೆ ಬಗೆಹರಿಸಲಾಗುವುದು. ದೇವರಕೊಟ್ಟ ಗ್ರಾಮದಲ್ಲಿ 100 ಎಕರೆ ಜಾಗದಲ್ಲಿ ನಿರ್ಮಿಸಿರುವ ವಸತಿ ಶಿಕ್ಷಣ ಸಮುಚ್ಚಯದಲ್ಲಿ ಕನಿಷ್ಠ 5,000 ಮಕ್ಕಳು ಓದಲು ಅವಕಾಶ ಕಲ್ಪಿಸಬೇಕೆಂಬ ಗುರಿ ಇದೆ ಎಂದು ಹೇಳಿದರು.ಪುರಸಭೆ ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜ್ಯೋತಿಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಸದಸ್ಯರಾದ ಜಿ. ಧನಂಜಯಕುಮಾರ್, ಗಂಗಾಧರ್ ಮಾತನಾಡಿದರು.

ಈ. ಮಂಜುನಾಥ್, ಎ. ಮಂಜುನಾಥ್, ಪನ್ನೀರ್‌ಸೆಲ್ವಂ, ಬಿ.ಕೆ. ಕರಿಯಪ್ಪ, ಬಿ. ದಲೀಚಂದ್, ಟಿ. ಚಂದ್ರಶೇಖರ್, ಎಚ್. ರಾಜಪ್ಪ, ಆಸಿಯಾಬಾನು, ಲಲಿತಾ, ಸಿಗ್‌ಬತ್‌ವುಲ್ಲಾ, ಪೂಂಗಾಣಮ್ಮ, ಫೈರೋಜ್, ಸಬೀಯಾ ಬೇಗಂ, ತಿಪ್ಪಮ್ಮ, ಎಂ. ಲಾಸರ್, ಓಂಕಾರಮ್ಮ, ತಿಮ್ಮರಾಜು, ಸುಂದರಮ್ಮ, ಕುಮಾರಸ್ವಾಮಿ, ತಿಪ್ಪೇಸ್ವಾಮಿ, ವಿಶ್ವನಾಥಯ್ಯ, ಲೋಕೇಶ್, ಮುಖ್ಯಾಧಿಕಾರಿ ವಿ. ಜಯಣ್ಣ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ ಉಪಸ್ಥಿತರಿದ್ದರು. ಎ. ಮಂಜುನಾಥ್ ಸ್ವಾಗತಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಕೆಂಚರಾಯಪ್ಪ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.