ಶುಕ್ರವಾರ, ಮೇ 14, 2021
21 °C

ರೂ. 60 ಲಕ್ಷ ವೆಚ್ಚದಲ್ಲಿ ಕಾಲುವೆ ದುರಸ್ತಿ : ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ರೈತರ 2,400 ಎಕರೆ ಜಮೀನುಗಳಿಗೆ ನೀರು ದೊರಕಿಸುವ ಹಿನ್ನೆಲೆಯಲ್ಲಿ ಅಂದಾಜು 60 ಲಕ್ಷ ರೂಪಾಯಿ ವೆಚ್ಚದಲ್ಲಿ  ಪಿಕ್ ಅಪ್ ಕಾಲುವೆ ದುರಸ್ತಿ ಹಾಗೂ ಹೂಳು ಎತ್ತುವ ಕಾಮಗಾರಿ  ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.ತಾಲ್ಲೂಕಿನ ಅಜ್ಜೀಪುರ ಸಮೀಪದ ಬಸಪ್ಪನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಕಬಿನಿ ಇಲಾಖೆ ವತಿಯಿಂದ ನೂತನ ಪಿಕ್‌ಅಪ್ ಕಾಲುವೆ ದುರಸ್ತಿ ಸೇರಿದಂತೆ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ಸಂಬಂಧ ಏರ್ಪಡಿಸಿದ್ದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಉಡುತೊರೆ ಹಳ್ಳ ಜಲಾಶಯದ ನೀರನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವ ಬಗ್ಗೆ ರೈತರು ಹೆಚ್ಚಿನ ಗಮನ ಹರಿಸಬೇಕು. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ರೈತರ ಜಮೀನಿಗೆ ತಲುಪುವಂತಹ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಕಾಮಗಾರಿ ನಡೆಯುವಂತಾಗಬೇಕು ಎಂದು ಶಾಸಕರು ಎಚ್ಚರಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿ, ಮುಖಂಡ ಚಿಕ್ಕತಮ್ಮಯ್ಯ, ಗುತ್ತಿಗೆದಾರ ನಾರಾಯಣರೆಡ್ಡಿ, ಸಹಾ ಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಚಂದ್ರಶೇಖರ್, ಹನು ಮಂತು, ಶಂಕರ್‌ನಾಯಕ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.