ಗುರುವಾರ , ಜೂನ್ 24, 2021
21 °C

ರೂ. 62.85 ಲಕ್ಷ ಮಂಜೂರು: ಶಾಸಕ ವಲ್ಯ್‌ಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಪ್ರಸಕ್ತ ವರ್ಷ ಮಳೆಯ ಅಭಾವದಿಂದ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ ಎದುರಿಸಲು ರಾಜ್ಯ ಸರ್ಕಾರ ಅಭಾವ ಪರಿಹಾರ ಯೋಜನೆ ಅಡಿಯಲ್ಲಿ ತಾಲ್ಲೂಕಿಗೆ 62.85 ಲಕ್ಷ ರೂ. ಮಂಜೂರು ಮಾಡಿದೆ ಎಂದು ಶಾಸಕ ಸುನೀಲ ವಲ್ಯ್‌ಪುರ ತಿಳಿಸಿದರು.ಅವರು ಸಮಸ್ಯಾತ್ಮಕ ಹಳ್ಳಿಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತಿ ರಾಜ್ ಎಂಜಿನಿಯರಿಂಗ್ ಇಲಾಖೆಯ ಶಾಖಾಧಿಕಾರಿಗಳಿಂದ ಅಭಾವ ಪರಿಹಾರ ಯೋಜನೆ ಅನುಷ್ಠಾನಕ್ಕೆ ರಚಿಸಿದ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಯ ಸಭೆಯಲ್ಲಿ ಮಾಹಿತಿ ಪಡೆದುಕೊಂಡು 47.85 ಲಕ್ಷ ರೂ.ಗಳ ಕ್ರಿಯಾ ಯೋಜನೆಗೆ ಒಪ್ಪಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳು ಕಳೆದ ಜನವರಿಯಲ್ಲಿ 15 ಲಕ್ಷ ರೂ. ನೀಡಿದ್ದು, ಇದರಿಂದ 10 ಕಾಮಗಾರಿ ಕೈಗೆತ್ತಿಕೊಂಡು 6 ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ ಎಂದು ಪಂಚಾಯತಿರಾಜ್ ಎಇಇ ರೇವಣಸಿದ್ದಪ್ಪ ಹಾಗರಗಿ ಸಭೆಗೆ ತಿಳಿಸಿದರು.

ಫೆಬ್ರವರಿಯಲ್ಲಿ ಮತ್ತೆ 15 ಲಕ್ಷ ರೂ.ಗಳು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದು, ಜಿಲ್ಲಾ ಪಂಚಾಯಿತಿಯಿಂದ 32.5 ಲಕ್ಷ ರೂ. ಬಿಡುಗಡೆಯಾಗಿವೆ. ಪ್ರಸಕ್ತ ವರ್ಷ ತಾಲ್ಲೂಕಿಗೆ 62.85 ಲಕ್ಷ ರೂ. ನೀರಿನ ಸಮಸ್ಯೆ ಎದುರಿಸಲು ಬಿಡುಗಡೆಯಾಗಿದ್ದು, ತಾಲ್ಲೂಕಿಗೆ 2 ಕೋಟಿಗೂ ಅಧಿಕ ಹಣದ ಅವಶ್ಯಕತೆಯಿದೆ. ಇದಕ್ಕಾಗಿ ತಾವು ಸರ್ಕಾರದ ಮೇಲೆ ಒತ್ತಡ ತಂದುಮೇವಿನ ಸಮಸ್ಯೆಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಸುನೀಲ ವಲ್ಯ್‌ಪುರ ತಾಲ್ಲೂಕಿನಲ್ಲಿ 60 ಸಾವಿರ ಮೆಟ್ರಕ್ ಟನ್ ಮೇವಿನ ದಾಸ್ತಾನುಯಿದೆ. ಜಾನುವಾರುಗಳ ರೋಗ, ರುಜಿನಗಳ ಚಿಕಿತ್ಸೆಗೆ ಬೇಕಾದ ಔಷಧಿ ದಾಸ್ತಾನು ಮಾಡಲಾಗಿದೆ ಎಂದರು. ತಹಸೀಲ್ದಾರ ನಕುಲ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ತಾಲ್ಲೂಕು ನೋಡಲ್ ಅಧಿಕಾರಿ ಡಾ. ಶಿಪ್ರಸಾದ, ತಾಪಂ  ಕಾರ್ಯನಿರ್ವಹಣಾಧಿಕಾರಿ ಜಗದೇವ್ ಬೈಗೊಂಡ, ಎಇಇ ರೇವಣಸಿದ್ದಪ್ಪ ಹಾಗರಗಿ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಚಿತ್ತಾಪುರ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರಯ್ಯ ಕೆಂಭಾವಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.