ರೂ 6.45 ಲಕ್ಷ ನಗದು, ರೂ 1.52 ಲಕ್ಷ ಮೌಲ್ಯದ ವಸ್ತು ವಶ

7

ರೂ 6.45 ಲಕ್ಷ ನಗದು, ರೂ 1.52 ಲಕ್ಷ ಮೌಲ್ಯದ ವಸ್ತು ವಶ

Published:
Updated:

ಬಳ್ಳಾರಿ: ನಗರದ ವಿವಿಧಡೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 14 ಜನರನ್ನು ಸೋಮವಾರ ಬಂಧಿಸಿರುವ ಪೊಲೀಸರು ರೂ 6.45 ಲಕ್ಷ ನಗದು ಹಾಗೂ 1.52 ಲಕ್ಷ ರೂ. ಬೆಲೆಯ ಟಿವಿ, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ವಿಶ್ವ ಕಪ್ ಕ್ರಿಕೆಟ್‌ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಲೀಗ್ ಪಂದ್ಯಕ್ಕೆ ಸಂಬಂಧಿಸಿದಂತೆ ಬಂಧಿತರು ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.ಮಿಲ್ಲರ್‌ಪೇಟೆ, ರಾಘವೇಂದ್ರ ಕಾಲೋನಿ, ತಿಲಕ್‌ನಗರ, ಕೌಲ್‌ಬಝಾರ್ ಪ್ರದೇಶ ನಿವಾಸಿಗಳಾದ ನವೀನ್, ಮುನ್ನಾ, ರವಿ, ಸುರೇಶ, ಬಿ.ಕೇಶವಮೂರ್ತಿ, ಸುಶೀಲ್ ಕುಮಾರ, ರಾಮಾಂಜಿನಿ, ಗಜೇಂದ್ರ, ವಿಜಯ ಕುಮಾರ, ವಿರೇಶ್, ಡಿ.ಬಸವರಾಜ, ಪಿ.ಚಂದ್ರ, ರಾಕೇಶ್, ಶಿವು  ಅವರನ್ನು ಬಂಧಿಸಲಾಗಿದೆ.ಗ್ರಾಮೀಣ, ಕೌಲ್‌ಬಝಾರ್, ಬ್ರೂಸ್‌ಪೇಟೆ, ಗಾಂಧಿನಗರ ಠಾಣೆ ಹಾಗೂ ಡಿಸಿಐಬಿ ಪೊಲೀಸರು ಜಂಟಿ ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಟಿವಿ, ಮೊಬೈಲ್ ಫೋನ್ ಮತ್ತಿತರರ ಉಪಕರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry